ಬೇಲೂರು ತಾ. ಅರೇಹಳ್ಳಿ ಹೋ. ಚೀಕನಹಳ್ಳಿ ಗ್ರಾಮದ ವೈ.ಡಿ.ನಂಜೆಗೌಡ ಲೈನ್ ಮನೆಯ ವಾಸಿಯಾದ ಶ್ವೇತಾ ಕೋಂ ಸಂತೋಷ ರವರ ಪತಿಯಾದ ಸಂತೋಷ ರವರು ಕೂಲಿಕೆಲಸ ಮಾಡಿಕೊಂಡಿದ್ದು, ದಿ:14/06/2023 ರಂದು ಬೆಳಿಗ್ಗೆ ಎಂದಿನಂತೆ ಕೂಲಿಕೆಲಸಕ್ಕೆಂದು ವೈ.ಡಿ.ನಂಜೇಗೌಡ ರವರ ತೋಟಕ್ಕೆ ಹೋಗಿ ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ ಲೈನ್‌ಮನೆಗೆ ಬಂದು ಕಾಫಿಯನ್ನು ಕುಡಿದು, ಮಧ್ಯಾಹ್ನ ಸುಮಾರು 03:30 ಗಂಟೆ ಸಮಯದಲ್ಲಿ ಸಂತೋಷ ಮನೆಯಿಂದ ಹೇಳದೇ ಹೋದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದು, ಆತನು ಉಪಯೋಗಿಸುತ್ತಿರುವ ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ಇದೂವರೆವಿಗೂ ಎಲ್ಲಾ ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗದೇ ಇದ್ದುದ್ದರಿಂದ ಪತ್ತೆಮಾಡಿಕೊಡಬೇಕೆಂದು ಶ್ವೇತಾರವರು ಅರೇಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.
ಕಾಣೆಯಾದವರ ಚಹರೆ ಗುರುತು:ಸಂತೋಷ, 25ವರ್ಷ, ಎತ್ತರ 170ಸೆಂ.ಮೀ, ಕಪುö್ಪತಲೆಕೂದಲು, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು, ಕನ್ನಡಭಾಷೆ ಬಲ್ಲವರಾಗಿದ್ದು, ಮನೆಯಿಂದ ಹೋಗುವಾಗ ತಿಳಿ ಗುಲಾಬಿ ಬಣ್ಣದ ತುಂಬುತೋಳಿನ ಟೀಶರ್ಟ್, ಕಪುö್ಪಬಣ್ಣ ಲೈಟ್‌ಪ್ಯಾಂಟ್ ಧರಿಸಿದ್ದು, ಸುಳಿವು ಸಿಕ್ಕಲ್ಲಿ ದೂರವಾಣಿ ಸಂಖ್ಯೆ 08177-221342 ಗೆ ಸಂಪರ್ಕಿಸುವುದು.