ಉಚ್ಚಂಗಿದುರ್ಗ ಗ್ರಾಮದ ಸಂತೆಯಲ್ಲಿ ಅಕಸ್ಮಿಕ ಬೆಂಕಿ ತಗುಲಿ, ಸಂತೆಯಲ್ಲೆಡೆ ಹೊಗೆ.

ಅರಸೀಕೆರೆ: ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಸಂತೆಯ ಮುಂಭಾಗದ ರಸ್ತೆಯಲ್ಲಿ ಗುರುವಾರ ಅಕಸ್ಮಿಕ ಬೆಂಕಿ ತಗುಲಿ, ಸಂತೆಯಲ್ಲೆಡೆ ಹೊಗೆ ಹರಡಿತ್ತು.


ಹೊಗೆಯಿಂದಾಗಿ ಅಂಗಡಿಗಳಲ್ಲಿ ವ್ಯಾಪಾರ ಮಾಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದರು. ವರ್ತಕರು ಕಣ್ಣು ಉಜ್ಜುತ್ತಾ ತರಕಾರಿ ಮಾರಾಟ ಮಾಡುವಲ್ಲಿ ತೊಡಗಿದ್ದರು.

ರಸ್ತೆ ಬದಿಯಲ್ಲಿ ಬೆಂಕಿ ಉರಿಯುತ್ತಿದ್ದರಿಂದ ಸಾರ್ವಜನಿಕರು ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸಿದ್ದರಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಎದುರಾಯಿತು. ಗಂಟೆಯ ಬಳಿಕ ಬೆಂಕಿ ನಂದಿದ್ದು, ವಾತಾವರಣ ತಿಳಿಗೊಂಡಿತು.

Post a Comment

Previous Post Next Post