ಅರ್ಚಕರ ಸಂಘದಿಂದ ಶಾಸಕ ಶಿವಲಿಂಗೇಗೌಡರಿಗೆ ಸನ್ಮಾನ

ಅರಸೀಕೆರೆ : ಹಾಸನ ಜಿಲ್ಲಾ ಅರ್ಚಕ ಸಂಘ ಹಾಗೂ ಚನ್ನರಾಯಪಟ್ಟಣ ತಾಲೂಕು ಧಾರ್ಮಿಕ ದತ್ತಿ ದೇವಾಲಯದ ಅರ್ಚಕ ಸಂಘದ ಪತಿಯಿಂದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರನ್ನು ಶನಿವಾರ ಸನ್ಮಾನಿಸಲಾಯಿತು. ಅರ್ಚಕ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್‌ ತಾಲೂಕು ಅಧ್ಯಕ್ಷ ವಳಗೇರಹಳ್ಳಿ ಶ್ರೀಧರ್‌ ಮೂರ್ತಿ ಕಾರೇಹಳ್ಳಿ ಕಿರಣ್‌, ಚಿಕ್ಕೋನಹಳ್ಳಿ ಯೋಗಾನಂದ,ಹೆಗ್ಗಡಿಗೆರೆ ಸುದರ್ಶನ್‌ ಹಾಗೂ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.  



ರಾಜ್ಯದಲ್ಲಿನ ಸಿ ದರ್ಜೆ ದೇವಾಲಯದ ಅರ್ಚಕರಿಗೆ ವೇತನವನ್ನು ಹೆಚ್ಚಳ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಶಾಸಕ ಶಿವಲಿಂಗೇಗೌಡ ಅವರನ್ನು ಅರ್ಚಕ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.


Post a Comment

Previous Post Next Post