ಸುಗಮ ಸಂಚಾರಕ್ಕೆ ತೊಂದರೆ: ಪುಟ್‌ಪಾತ್ ಅಂಗಡಿಗಳ ತೆರವಿಗೆ ಒತ್ತಾಯ

ಹಾಸನ : ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಫುಟ್ಪಾತ್ ನಲ್ಲಿ ಹಾಕಿರುವ ಪೆಟ್ಟಿಗೆ ಅಂಗ ಡಿಗಳನ್ನು ತೆರವು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ , ಬಸ್ ನಿಲ್ದಾಣ, ಕಾಲೇಜು ಸಂಪರ್ಕ ಮುಖ್ಯರಸ್ತೆ ಇದಾಗಿದ್ದು ದಿನನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಸಾರ್ವಜನಿಕರು ಓಡಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿ ಪ್ರಾಣ ಹಾನಿ ಆಗುವ ಸಾಧ್ಯತೆಗಳು ಹೆಚ್ಚಿದ್ದು ದಿನನಿತ್ಯ ಸಣ್ಣಪುಟ ಅಪಘಾತಗಳು ನಡೆದು ಜನರ ನಡುವೆ ಜಟಾಪಟಿಯು ನಡೆದಿರುವ ಉದಾಹರಣೆಗಳು ಇದೆ.


ಈ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುª ತೊಂದರೆ ಸಂಬAಧ ಹಲವಾರು ಸಂಘಟನೆಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಇದುವರೆಗೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿ ಕರು ಆರೋಪಿಸಿದ್ದಾರೆ . ಸಂಬAಧಪಟ್ಟ ಅಧಿಕಾರಿಗಳು ನಗರ ಸಭೆ ಇತ್ತ ಗಮನಹರಿಸಿ ಫುಟ್ ಪಾತ್ ನಲ್ಲಿ ಹಾಕಿರುವ ಪೆಟ್ಟಿಗೆ ಅಂಗಡಿ ತೆರವು ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.


Post a Comment

Previous Post Next Post