ಅರೇಹಳ್ಳಿ: ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸಿಡಿಲು ಬಡಿದ ಪರಿಣಾಮ ಹಸುವೊಂದು ಮೃತಪಟ್ಟ ಘಟನೆ ಬಿಕ್ಕೋಡು ಹೋಬಳಿಯ ದೊಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಎಂಬುವವರಿಗೆ ಸೇರಿದ ಮಿಶ್ರ ತಳಿ ಹಸುವನ್ನು ತಮ್ಮ ಹೊಲದಲ್ಲಿ ಮೇಯಲು ಬಿಟ್ಟಿದ್ದರು. ಮಧ್ಯಾಹ್ನ ಮಳೆ ಸುರಿಯುತ್ತಿದ್ದರಿಂದ ಹಸುವು ಅಲ್ಲೆ ಇದ್ದ ಮಾವಿನ ಮರದ ಬಳಿ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇದರಿಂದ ಹಸುವಿನ ಮಾಲೀಕರಿಗೆ ಅಂದಾಜು 50,000 ನಷ್ಟ ಸಂಭವಿಸಿದೆ. ಮೃತ ಹಸುವು 4 ತಿಂಗಳ ಗರ್ಭ ಧರಿಸಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯ ಡಾ.ಎಂ.ಆರ್ ಸುಹಾಸ್ ಮಾಹಿತಿ ನೀಡಿದ್ದಾರೆ.
ಹಾಸನ ಜಿಲ್ಲೆ ವ್ಯಾಪ್ತಿಯ ಸುದ್ದಿಗಳ ಪ್ರಕಟಣೆಗೆ ಸುದ್ದಿಯನ್ನು hassansimenews@gmail.com ಗೆ ಇ- ಮೇಲ್ ಕಳುಹಿಸಿ.
ಹಾಸನ ಜಿಲ್ಲೆಯ ಡಿಜಿಟಲ್ ವೆಬ್ ಚಾನಲ್ ಇನ್ನಷ್ಟು ಅಪ್ಡೇಟ್ ಗಳಿಗಾಗಿ ಹಾಸನ ಸೀಮೆ ಸದಸ್ಯತ್ವ ಪಡೆಯಲು ಈ ಕೆಳಗಿನ ಲಿಂಕ್ ಸ್ಪರ್ಶಿಸಿ
👇👇👇
Tags
ಬೇಲೂರು