ದಿನಾಂಕ:02/07/2023 ರಂದು ಸಂಜೆ ಸುಮಾರು 06:00 ಗಂಟೆ ಸಮಯದಲ್ಲಿ ಹಾಸನ ತಾ. ಶಾಂತಿಗ್ರಾಮ ಹೋ. ಗಾಣಿಗರಹೊಸಳ್ಳಿ ಗ್ರಾಮದ ವಾಸಿಯಾದ ರೂಪಾ ಕೋಂ ಕುಮಾರರವರು ಮನೆಯಿಂದ ಅರ್ಧ ಕಿ.ಮೀ ದೂರವಿರುವ ಹಾಸನ-ಹೊಳೇನರಸೀಪುರ ರಸ್ತೆಯ ಕೊಂತಗೌಡನಹಳ್ಳಿ ಹಳ್ಳ ಗ್ರಾಮದ ರಸ್ತೆಯ ಬಾಜುವಿನಲ್ಲಿನ ತಮ್ಮ ಅಂಗಡಿಯಲ್ಲಿದ್ದಾಗ ಕಸುಗುಡಿಸಿ ನೀರುಹಾಕುತ್ತಿದ್ದ ತಮ್ಮ ಪತಿ ಕುಮಾರ ರವರಿಗೆ ಗ್ರಾಮದ ಚರಣ ಮತ್ತು ಆತನ ಜೊತೆಯಲ್ಲಿದ್ದ ಇಬ್ಬರು ಹಾಸನ ಕಡೆಯಿಂದ ಒಂದು ಆಟೋದಲ್ಲಿ ಅಂಗಡಿಯ ಬಳಿಗೆ ಬಂದು ಚರಣನು ಹಳೆಯ ದ್ವೇಷದಿಂದ ಕುಮಾರರವರಿಗೆ ಏನೋ ಸೂಳೆಮಗನೇ, ಬೋಳಿಮಗನೇ ನಿಮ್ಮದು ಅತಿಯಾಯ್ತು, ಮಗನೆ ಇವತ್ತು ನಿನ್ನನ್ನು ಬಿಡೋದಿಲ್ಲ, ಅಂತ್ಯ ಕಾಣಿಸುತ್ತೇನೆಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬಿಯರ್‌ಬಾಟಲಿಯಿಂದ ಚುಚ್ಚಲು ಬಂದಿದ್ದು, ತಪ್ಪಿಸಿಕೊಂಡು ಅಂಗಡಿಯ ಒಳಗೆ ಓಡಿ ಬಂದಾಗ ಚರಣನ ಜೊತೆ ಇದ್ದ ಇಬ್ಬರು ನನ್ನ ಮಗನನ್ನು ಬಿಡೋದು ಬೇಡ ಇಡ್ಕಳ್ರೋ ಎಂದು ಕೊಲೆ ಮಾಡುವ ಉದ್ದೇಶದಿಂದ ಅಂಗಡಿಯೊಳಕ್ಕೆ ನುಗ್ಗಿ, ಕೂಗಾಡಿದರೂ ಬಿಡದೇ ಇಬ್ಬರು ಕೈಯಿಂದ ಮೈಕೈಗೆ ಮನಬಂದAತೆ ಹೊಡೆದು, ಚರಣನು ಕೈಯಲ್ಲಿದ್ದ ಬಿಯರ್‌ಬಾಟಲಿಯಿಂದ ಕುಮಾರರವರಿಗೆ ಚುಚ್ಚಲು ಬಂದಾಗ ತಪ್ಪಿಸಿಕೊಂಡಿದ್ದು, ಬಿಯರ್‌ಬಾಟಲಿ ಅಂಗಡಿಯ ಕಬೋರ್ಡ್ಗೆ ತಾಗಿ ಹೊಡೆದು ಹೋಗಿದ್ದು, ಹಲ್ಲೆ ಮಾಡಿರುವ ಮೇಲ್ಕಂಡವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕುಮಾರರವರ ಪತ್ನಿ ರೂಪಾರವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು, ತನಿಖೆಯಲ್ಲಿರುತ್ತದೆ.