ಸೈಕ್ಲೀಂಗ್ ನೊಂದಿಗೆ ಸೇವೆ: ಮಾದರಿಯಾದ ಯುವಪಡೆ

ಈ ದೇವಾಲಯಕ್ಕೆ ಏಳು ದ್ವಾರ ಬಾಗಿಲುಗಳು ಇದ್ದವೆಂದು ಗ್ರಾಮಸ್ಥರು ಇತಿಹಾಸವನ್ನು ನೆನಪಿಸಿಕೊಳ್ಳುತ್ತಾರೆ. ಶಿಥಿಲಾವಸ್ಥೆಯಲ್ಲಿರುವ ಈ ದೇವಾಲಯವನ್ನು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜೀರ್ಣೋದ್ಧಾರ ಮಾಡುವುದರ ಮೂಲಕ ನಶಿಸಿ ಹೋಗುತ್ತಿರುವ ಸ್ಮಾರಕ ರೂಪದ ದೇವಾಲಯಗಳನ್ನು ಸಂರಕ್ಷಿಸಬೇಕು ಎಂದು ಸದಸ್ಯರ ಮನವಿಯಾಗಿದೆ.

ಅರಸೀಕೆರೆ: ತಾಲ್ಲೂಕಿನ ಕೊಂಡವಾಗಿಲು ಗ್ರಾಮದ ಸುಮಾರು ಎಂಟು ನೂರು ವರ್ಷಗಳ ಇತಿಹಾಸವಿರುವ ಶ್ರೀ ಚೆನ್ನಕೇಶವ ದೇವಾಲಯವನ್ನು ನಗರದ ಸೈಕ್ಲಿಂಗ್ ಗ್ರೂಪ್ ಸದಸ್ಯರು ಸೇವಾ ಕಾರ್ಯದ ಮೂಲಕ ಗ್ರಾಮಸ್ಥರೊಂದಿಗೆ  ಸ್ವಚ್ಛಗೊಳಿಸಿ  ಸಾರ್ವಜನಿಕ ವಲಯದಲ್ಲಿ ಪ್ರಸಂಸೆಗೆ ಒಳಗಾಗಿದ್ದಾರೆ.

ಸೈಕ್ಲಿಂಗ್ ಗ್ರೂಪ್‌ನ ಸದಸ್ಯರು ನಗರದಿಂದ ಹತ್ತಾರು ಕಿ,ಮೀ ದೂರದವರೆಗೆ ಸಾಮೂಹಿಕವಾಗಿ ಸೈಕ್ಲಿಂಗ್ ಮಾಡುವುದರ ಮೂಲಕ ವಿವಿಧ ಸ್ಮಾರಕಗಳು, ದೇವಾಲಯಗಳು ಹಾಗೂ ಪ್ರಕೃತಿ ತಾಣಗಳಿಗೆ ಬೇಟಿ ನೀಡಿ ಪರಿಸರ ಜಾಗೃತಿಯೊಂದಿಗೆ ತಮ್ಮ ವಾರಾತ್ಯಂದ ಸಮಯವನ್ನು ಆರೋಗ್ಯ ಕಾಪಾಡಿಕೊಳ್ಳಲು ಸೈಕ್ಲಿಂಗ್ ಹವ್ಯಾಸವನ್ನು ರೂಡಿಸಿಕೊಂಡಿದ್ದಾರೆ.

ಪುರಾತನ ಸ್ಮಾರಕ  ಮತ್ತು ದೇವಾಲಯಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಇಂದಿನ ಯುವ ಪೀಳಿಗೆಗೆ ಈ  ಸೇವಾ ಕಾರ್ಯ ಮಾದರಿ

ಸೇವಾಕಾರ್ಯ ಸಮಯದಲ್ಲಿ ಸ್ಥಳಿಯ ಗ್ರಾಮಸ್ಥರು ಕೈಜೋಡಿಸಿ ಪರಸ್ಪರ ಕರಸೇವೆ ಮಾಡಿದರು. ಬಿಂದು ಅರಸ್, ವಸಂತ್ ಕುಮಾರ್, ಶ್ರೀಕಾಂತ್, ಚಂದನ್ ಸಿಂಗ್, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. 

                                                                                            ವರದಿ:ಹೊಯ್ಸಳ ಪಥ

Post a Comment

Previous Post Next Post