ಶೆಡ್‌ನಲ್ಲಿ ಕಟ್ಟಿ ಹಾಕಿದ್ದ ಹಸುಗಳ ಕಳವು

 

ಹಾಸನ ತಾ. ದುದ್ದ ಹೋ. ಚಿಕ್ಕಕಡಲೂರು ಗ್ರಾಮದ ವಾಸಿಯಾದ ಮಂಜೇಗೌಡ ಬಿನ್ ಮಲ್ಲೇಶಗೌಡರವರು ಹಸುಗಳನ್ನು ಸಾಕಿಕೊಂಡು ಜೀವನೋಪಾಯ ಮಾಡಿಕೊಂಡಿದ್ದು, ದಿನಾಂಕ:01/07/2023 ರಂದು ಎಂದಿನAತೆ ಸಂಜೆ ಸಮಯದಲ್ಲಿ ಹಸುಗಳಲ್ಲಿ ಹಾಲು ಕರೆದು ಶೆಡ್‌ನಲ್ಲಿ ಕಟ್ಟಿಹಾಕಿ, ಶೆಡ್‌ನ ಬೀಗ ಹಾಕಿದ್ದು, ದಿನಾಂಕ:02/07/2023 ರಂದು ಬೆಳಿಗ್ಗೆ ಸುಮಾರು 05:45 ಗಂಟೆ ಸಮಯದಲ್ಲಿ ಶೆಡ್‌ನ ಹತ್ತಿರ ಹಾಲು ಕರೆಯಲೆಂದು ಹೋಗಿ ನೋಡಲಾಗಿ ಶೆಡ್‌ನ ಬಾಗಿಲ ಬೀಗವನ್ನು ಯಾರೋಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು, ಕಟ್ಟಿದ್ದ 2 ಹೆಚ್.ಎಫ್ ತಳಿಯ ಹಸುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಪುö್ಪಬಣ್ಣದ, ಮೈಮೈಲೆ ಬಿಳಿ ಮಚ್ಚೆ ಇರುವ ಹಾಗು ಬಿಳಿಬಣ್ಣದ ಮೈಮೇಲೆ ಕಪುö್ಪಮಚ್ಚೆ ಇರುವ ಹಸುಗಳಾಗಿದ್ದು, ಅಂದಾಜು ಬೆಲೆ 1,35,000/- ಗಳಾಗಿರುತ್ತದೆ, ಪತ್ತೆಮಾಡಿಕೊಡಬೇಕೆಂದು ಮಂಜೇಗೌಡರವರು ದುದ್ದ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

Post a Comment

Previous Post Next Post