ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿಯ ರೈಲ್ವೆ ಪ್ಲೇವರ್ ಕುಸಿತ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ  ಹಂಗರಹಳ್ಳಿ ಗ್ರಾಮದ ರೈಲ್ವೆ ಪ್ಲೇವರ್ ( ಹಾಸನ - ಮೈಸೂರು ಹೆದ್ದಾರಿ ) ಕುಸಿತಗೊಂಡಿದೆ ಕೂಡಲ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು ಪುನರ್ ಕಾಮಗಾರಿ ಕೈಗೊಂಡು ದುರಂತ ತಪ್ಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
 
ಹಾಸನ : ಭಾರಿ ಮಳೆ ಸುರಿದ ಪರಿಣಾಮ  ಫ್ಲೈ ಓವರ್ ಸ್ಲ್ಯಾಬ್‌ಗಳು ಹಾಗು ಮಣ್ಣು ಕುಸಿದಿರುವ ಘಟನೆ  ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾಸನದಿಂದ ಹೊಳೆನರಸೀಪುರಕ್ಕೆ ತೆರಳುವ ಮಾರ್ಗ ಮಧ್ಯೆ ಈ ಫ್ಲೈ ಓವರ್ ಇದ್ದು, ಪ್ರತಿನಿತ್ಯ ಸಾವಿರಾರು  ವಾಹನಗಳು ಸಂಚರಿಸುತ್ತವೆ. 

ಬೃಹತ್ ವಾಹನಗಳು ಸಂಚರಿಸಿದರೆ  ಫ್ಲೈಓವರ್ ಕುಸಿಯುವ ಭೀತಿ ಎದುರಾಗಿದೆ. ನಿರ್ಮಾಣ ಹಂತದಲ್ಲಿರುವಾಗಲೇ ಎರಡು ಬಾರಿ  ಫ್ಲೈಓವರ್ ಸ್ಲ್ಯಾಬ್‌ಗಳು  ಕುಸಿದಿದ್ದರೂ,  ಗುತ್ತಿಗೆದಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ.

Post a Comment

Previous Post Next Post