ಮಧ್ಯ ಸೇವನೆಯಿಂದಾಗುವ ಅಸ್ವಸ್ಥತೆಗಳ ತಡೆಗಡಗಟ್ಟುವಿಕೆ ಮತ್ತು ಸಮುದಾಯ ಆಧಾರಿತ ಅರಿವು ಕಾರ್ಯಕ್ರಮ

 ಚನ್ನರಾಯಪಟ್ಟಣ: ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಕೇಂದ್ರ ಆಯುಷ್ ಸಚಿವಾಲಯ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜ್ ಮತ್ತು ಆಸ್ಪತ್ರೆ ಹಾಸನ ಹಾಗೂ ಸರ್ಕಾರಿ ಆಸ್ಪತ್ರೆ ಚನ್ನರಾಯಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಮಧ್ಯ ಸೇವನೆಯಿಂದಾಗುವ ಅಸ್ವಸ್ಥತೆಗಳ ತಡೆಗಟ್ಟುವಿಕೆ ಮತ್ತು ಸಮುದಾಯ ಆಧಾರಿತ ಸಮಗ್ರ ನಿರ್ವಹಣೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿ.ಎನ್ ಬಾಲಕೃಷ್ಣ.



ಅವರು ಮದ್ಯಪಾನ ದುಶ್ಚಟದಿಂದ ಹಲವಾರು ಮಂದಿ ತಮ್ಮ ಜೀವನವನ್ನು ನರಕಗೊಳಿಸಿಕೊಂಡಿದ್ದಾರೆ ಇಂತಹ ನರಕ ಜೀವನವನ್ನು ತೊರೆಯಬೇಕಾದರೆ ಪ್ರತಿಯೊಬ್ಬ ಮಧ್ಯಪಾನಿಗಳು ಉತ್ತಮ ವೈದ್ಯರ ಸಲಹೆಯನ್ನು ಪಡೆದುಕೊಂಡು ಚಟದಿಂದ ಹೊರಬರಬೇಕೆಂದು ಸಲಹೆ ನೀಡಿದರು. ಮದ್ಯಪಾನಿಗಳ ಜೀವನದಲ್ಲಿ ಜಾಗೃತಿ ಮೂಡಿಸಿ ಮಧ್ಯಪಾನ ವ್ಯಸನಿಗಳನ್ನು ಉತ್ತಮ ವ್ಯಕ್ತಿಗಳಾಗಿ ಮಾಡುವಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜ್ ಮತ್ತು ಆಸ್ಪತ್ರೆ ಇವರ ಕೊಡುಗೆಯು ಅಪಾರವಾಗಿದೆ ಎಂದರು, ಇಂತಹ ಜನಪರ ಕಾರ್ಯವನ್ನು ಮಾಡುತ್ತಿರುವ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ವೈದ್ಯರ ಸಹಾಯದಿಂದ ಹಂತ ಹಂತವಾಗಿ ಮಧ್ಯಪಾನ ವ್ಯಸನದಿಂದ ಹೊರಬರುವುದು ಹೇಗೆ ಎಂಬ ವಿಚಾರವನ್ನು ವೈದ್ಯರುಗಳಾದ ಡಾಕ್ಟರ್ ಪ್ರಜ್ವಲ್ ಅವರು ಮಾರ್ಗದರ್ಶನ ನೀಡುತ್ತಾ ಕಾರ್ಯನಿರ್ವಹಿಸುತ್ತಾರೆ ಇವರ ಸೇವೆಯು ತುಂಬಾ ಶ್ಲಾಘನೀಯ ಎಂದರು


ಇದೇ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ, ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಪ್ರಸನ್ನ ಎನ್ ರಾವ್, ಡಾಕ್ಟರ್ ಮಹೇಶ್, ಡಾಕ್ಟರ್ ಶೈಲಜಾ, ಡಾಕ್ಟರ್ ಪ್ರಸಾದ್, ಡಾಕ್ಟರ್ ಕವಿತಾ, ಡಾಕ್ಟರ್ ಮಂಜುಳಾ,ಡಾಕ್ಟರ್ ಪ್ರಜ್ವಲ್, ಸರ್ಕಾರಿ ಆಸ್ಪತ್ರೆಯ ನೀಲಮ್ಮ ಸೇರಿದಂತೆ ಇತರರು ಹಾಜರಿದ್ದರು.

Post a Comment

Previous Post Next Post