ಸಹುಕಾರ್ ಸಂಪತ್ತ ಅಯ್ಯಂಗಾರ್ ಎಂದೇ ಹೆಸರಾಗಿದ್ದ ಜಿ.ಎಸ್.ಸಂಪತ್ತ ಅಯ್ಯಂಗಾರ್ ಅವರು ಜಿಲ್ಲೆಯ ಪ್ರಮುಖ ಸ್ವಾತಂತ್ರ್ಯಹೋರಾಟಗಾರರಲ್ಲಿ ಓರ್ವರು. ಕೊಡುಗೈ ದಾನಿ. ಗೊರೂರಿನ ಎ.ಎನ್.ವರದರಾಜುಲು ಕಾಲೇಜಿಗೆ ಅವರ ಮತ್ತು ಅವರ ಕುಟುಂಬದ ಕೊಡುಗೆ ಮರೆಯುವಂತಿಲ್ಲ ಎಂದು ನಿವೃತ್ತ ಪ್ರಾಂಶುಪಾಲರು ಡಾ. ಎಂ.ಆರ್.ಚಂದ್ರಶೇಖರ್ ತಿಳಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಓರ್ವ ಖಗೋಳ ಶಾಸ್ತçಜ್ಞರಾಗಿ ಇವರು ರಾಮನ ಜನ್ಮ ಕುಂಡಲಿ ಬರೆದಿದ್ದಾರೆ. ರಾಮಾಂಕಿತ ಉಂಗುರ ಮತ್ತು ಕಾಲ ಪರಿಚಯ, ಹನುಮಂತನು ಲಂಕೆಗೆ ಹೋದ ದಾರಿ ಮತ್ತು ಮಹಾಭಾರತದ ಯುದ್ದಕಾಲ ಹಾಗೂ ಹತ್ತು ಸಾವಿರ ವರ್ಷಗಳ ಚರಿತ್ರೆ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಾಭಾರತ ಮತ್ತು ರಾಮಾಯಣ ಯುದ್ದ ಕಾಲವನ್ನು ಪಂಚಾAಗದ ಆಧಾರದ ಮೇಲೆ ಗುರುತಿಸಿದ್ದಾರೆ ಎಂದರು. ಉಪನ್ಯಾಸಕ ಡಾ. ಬರಾಳು ಶಿವರಾಮ ಅವರು ಜಿ.ಎಸ್. ಸಂಪತ್ತೆöÊAಗಾರ್ ಅವರ ಸ್ವಾತಂತ್ರ್ಯಹೋರಾಟ ಕುರಿತಂತೆ ಕವಿ ಎನ್.ಎಲ್.ಚನ್ನೇಗೌಡ ತಾವು ಕಂಡ ಅವರ ಬದುಕು ಕುರಿತಂತೆ ಮಾತನಾಡಿದರು. ಕವಿ ಗೋಷ್ಠಿಯಲ್ಲಿ ಸುಶೀಲ ಸೋಮಶೇಖರ್, ಸುಂದರೇಶ್ ಡಿ. ಉಡುವೇರೆ, ವನಜ ಸುರೇಶ್, ಮಾಳೇಟರ ಸೀತಮ್ಮ ವಿವೇಕ್, ಉಮೇಶ್ ಹೊಸಹಳ್ಳಿ, ಸಾವಿತ್ರಿ ಬಿ.ಗೌಡ, ರೇಖಾ ಪ್ರಕಾಶ್, ಪ್ರತಿಭಾ ಬಿ.ಆರ್. ಹೆಚ್.ಬಿ.ಚೂಡಾಮಣಿ, ಪ್ರಜ್ವಲ್ ಕೆ.ಎಂ.ಕೌಡಳ್ಳಿ, ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ. ಸರೋಜಮ್ಮ ಸ್ವರಚಿತ ಕವಿತೆ ವಾಚಿಸಿದರು. ಎ.ವಿ.ರುದ್ರಪ್ಪಾಜಿರಾವ್, ಜಯದೇವಪ್ಪ, ಸಿ.ಡಿ.ಗುರುಲಿಂಗಪ್ಪ, ಜೆ.ಆರ್.ರವಿಕುಮಾರ್, ಯಾಕೂಬ್, ಜಿ.ಆರ್.ಶ್ರೀಕಾಂತ್, ಹೆಚ್.ಜಿ.ಕಾಂಚನಮಾಲಾ, ಎಸ್.ಎಸ್.ಚಂದ್ರಣ್ಣ, ದ್ಯಾವಪ್ಪ, ಕಾಳಾಚಾರ್, ಕಲಾವಿದ ಅತ್ನಿ ಸುರೇಶ್, ಕೆ.ವಿ.ಮಾರೆಸನ್ ಮೊದಲಾದವರು ಇದ್ದರು. ಸಮುದ್ರವಳ್ಳಿ ವಾಸು ಸ್ವಾಗತಿಸಿದರು. ದಾಕ್ಷಾಯಿಣಿ ಮುರುಗನ್ ಪ್ರಾರ್ಥಿಸಿದರು. ಶಿವನಂಜೇಗೌಡರು ಜನಪದ ಗೀತೆ, ಬ್ಯಾಟಾಚಾರ್ ರಂಗಗೀತೆಗಳಿಂದ ರಂಜಿಸಿದರು. ಜಗದೀಶ್ ರಾಮಘಟ್ಟ ಅವರ ರಾವಣ ಪಾತ್ರಾಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಿವೃತ್ತ ತಹಸೀಲ್ದಾರ್ ರಂಗನಟರು ಎ.ವಿ.ರುದ್ರಾಪ್ಪಾಜಿರಾವ್ ಅವರನ್ನು ಸನ್ಮಾನಿಸಲಾಯಿತು.