ಹಾಸನ ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ ಮೊಬೈಲ್ ಫೋನ್ ಗಾಂಜಾ ಪತ್ತೆ

ಹಾಸನ: ಜಿಲ್ಲಾ ಕಾರಗೃಹದ ಮೇಲೆ ಹಾಸನ ಜಿಲ್ಲಾ ಪೊಲೀಸರು ದಾಳೆ ನಡೆಸಿದ ವೇಳೆ ಆರೋಪಿಗಳ ಬಳಿ ಮೊಬೈಲ್, ಗಾಂಜಾ, ಬಿಡಿ, ಸಿಗರೇಟ್ ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
       ಜಿಲ್ಲಾ ಎಸ್ಪಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ತಮ್ಮಯ್ಯ, ಡಿವೈಎಸ್ಪಿ ಮುರುಳಿ ನೇತೃತ್ವದ್ಲಿ ದಾಳಿ ನಡೆಸಿದಾಗ ಆರೋಪಿಗಳ ಬಳಿ ೨೦ ಮೊಬೈಲ್ ಪೋನ್, ಗಾಂಜಾ, ಬಿಡಿ ಸಿಗರೇಟ್ ಇರುವುದು ಕಂಡು ಬಂದಿದ್ದು, ಎಲ್ಲಾವನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲಾವನ್ನು ಜೈಲಿನೊಳಗೆ ಪೂರೈಕೆ ಮಾಡುತ್ತಿರುವ ಬಗ್ಗೆಯೂ ಕೂಡ ತನಿಖೆ ಮುಂದುವರೆದಿದೆ ಎಂದರು. ಮಧ್ಯರಾತ್ರಿ ೧೨ರ ಸಮಯದಲ್ಲಿ ೬೦ ಜನ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ತಂಡ ಜಿಲ್ಲಾ ಕಾರಾಗೃಹದ ಮೇಲೆ ದಾಳಿ ನಡೆಸಿ ೧೮ ಮೊಬೈಲ್, ೨೦ ಗ್ರಾಂ ಗಾಂಜಾ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ೧೮ ಮಂದಿ ಆರೋಪಿಗಳ ವಿರುದ್ಧ ೫ ಪ್ರಕರಣವನ್ನು ದಾಖಲಿಸಲಾಗಿದೆ ಎಂದು

ಹೇಳಿದರು. ಈ ಪ್ರಕರಣದಲ್ಲಿ ಸ್ಥಳೀಯ ಪೊಲಿಸ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ, ಕರ್ತವ್ಯ ಲೋಪ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾರಾಗೃಹದ ಬಗ್ಗೆ ಡಿಜಿಗೆ ವರದಿ ಸಲ್ಲಿಸಲಾಗುವುದು ಎಂದರು.

       ಆರೋಪಿಗಳನ್ನು ಹಳೇಬಿಡು ಹೋಬಳಿಯ ಸಿದ್ದಾಪುರ ಗ್ರಾಮದ ಶರತ್ ಸಿ ಬ್ಯಾರೇಕ್ ಉಮಾ ಮಹೇಶ್ ೨೧ ವರ್ಷ, ಹೊಳೆನರಸೀಪುರ ತಾಲ್ಲೂಕು. ಬಿಟ್ಟಗೋಡನಹಳ್ಳಿಯ ಬೈರಾಜ್ (೫೦) ಹಾಸನ ತಾಲ್ಲೂಕು ಗುಡ್ಡಹಳ್ಳಿ ಗ್ರಾಮದ ಸಂಜು (೨೯), ಮಂಡ್ಯ ಜಿಲ್ಲೆಯ ಬಿ.ಹೊಸೂರು ಗ್ರಾಮದ ಶಿವಕುಮಾರ್, ಸಕಲೇಶಪುರದ ಕುಶಾಲನಗರ ಬಡಾವಣೆಯ ಐಷಾನ್ ಕುರೇಶಿ (೨೭), ಬಾಗೂರು ಗ್ರಾಮದ ಮಲ್ಲಿಕ್ (೨೭), ಅರಸೀಕೆರೆಯ ಲಕ್ಷ್ಮೀಪುರ ಬಡಾವಣೆಯ ರಘು (೨೯), ಹಾಸನದ ಶ್ರೀನಗರದ ರಹೀಲ್ (೨೯), ಆದಿಲ್ (೩೬), ಕಮ್ಮಾರಹಳ್ಳಿಯ ಸುದರ್ಶನ್ (೪೨), ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಯಶ್ವಂತ್ ನಾಯ, ಹೊಳೆನರಸೀಪುರ ತಾಲ್ಲೂಕು ಕಡವಿನಕೋಟೆಯ ಮೋಹನ್ ಕುಮಾರ್ (೩೨), ಹಾಸನ ಪೆನ್‌ಷನ್ ಮೊಹಲ್ಲಾದ ಅಬ್ರಾನ್ (೨೩), ರಂಗೋಲಿ ಹಳ್ಳದ ತೇಜಸ್ (೨೧), ಹಾಸನ ತಾಲ್ಲೂಕು ಸತ್ತಿಗರಹಳ್ಳಿಯ ನಾಗೇಶ್ ಹಾಗೂ ಇನ್ನೂ ಮೂವರ ಮೇಲೆ ವಿಳಾಸ ಪತ್ತೆಕಾರ್ಯ ಕೈಗೊಂಡಿದೆ. ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

Post a Comment

Previous Post Next Post