ಸಂತೋಷ ಇದ್ದರೆ ಯಶಸ್ಸು ಗ್ಯಾರಂಟಿ : ನಿರ್ಮಾಲನಂದನಾಥ ಸ್ವಾಮೀಜಿ ನುಡಿ

ಹಾಸನ: ಜೀವನದಲ್ಲಿ ಸಂತೋಷ ಇದ್ದರೇ ಮಾತ್ರ ಯಶಸ್ಸು ಗ್ಯಾರಂಟಿ ಕಾಣಲು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮುಖ್ಯ ಮಠದ ಮಠಾಧೀಶರಾದ ಶ್ರೀ ನಿರ್ಮಾಲನಂದನಾಥ ಸ್ವಾಮಿಜಿ ಅವರು ತಮ್ಮ ಆಶೀರ್ವಚನದಲ್ಲಿ ನುಡಿದರು.
      ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬಿಜೆಎಸ್ ಪಿಯು ಕಾಲೇಜು ಬೇಲೂರು ಮತ್ತು ಹಾಸನ ವಿದ್ಯಾರ್ಥಿಗಳಿಗೆ ಸ್ವಾಗತೋತ್ಸವ ಮತ್ತು ನೀಟ್, ಜೀ, ಕೆ. ಸಿಇಟಿ ತರಗತಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು, ದಿನದಲ್ಲಿ 8 ಗಂಟೆ ಮಲಗಿದರೇ 2 ಗಂಟೆ ಮಾತ್ರ ನಿದ್ದೆ ಸಿಗುತ್ತದೆ. ಉಳಿದ 6 ಗಂಟೆಗಳ ಕಾಲ ಕನಸ್ಸು ಕಾಣುತ್ತೇವೆ. ಅದು ಪ್ರಕೃತಿ ರೀತಿಯೇ ಆಗಿದ್ದು, ಯಶಸ್ಸು ಆಗಿದೆ ಎಂದರೇ ಸಂತೋಷ ಸಿಗಲೇಬೇಕೆದಲ್ಲ. ಸಂತೋಷ ಇದ್ದರೇ ಮಾತ್ರ ಯಶಸ್ಸು ಗ್ಯಾರಂಟಿ ಸಿಗುತ್ತದೆ. ಸುಖ ಇದ್ದಾಗ ಸಂತೋಷ ಪಡದೇ ಹೋದರೇ ಕಷ್ಟ ಇದ್ದಾಗ ಸಂತೋಷ ಪಡಲು ಸಾಧ್ಯವೇ? ಆನಂದವಾಗಿ ಬದುಕಲು ಜೀವನ ರೂಢೀಸಿಕೊಳ್ಳಬೇಕೆಂದರು. ಪ್ರತಿ ವಿದ್ಯಾರ್ಥಿಗಳಲ್ಲಿ ತಮ್ಮದೆಯಾದ ಗುರಿ ಹೊಂದಿ ಸಾಧನೆ ಮಾಡುವ ಛಲ ಬೆಳೆಸಿಕೊಳ್ಳಬೇಕು. ಮಹಾನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಗುರಿಯತ್ತ ಕಾಲಿಡಬೇಕು. ಓದುವ ವೇಳೆ ಸಮಯ ವ್ಯರ್ಥ ಮಾಡಿಕೊಂಡರೇ ಮತ್ತೆ ಆ ಸಮಯ ವಾಪಸ್ ಬರುವುದಿಲ್ಲ. ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಈ ಹಂತ ಮುಖ್ಯವಾಗಿದೆ. ಯಾವುದೇ ಒಂದು ಕೆಲಸ ಆಗಲಿ, ಶಿಕ್ಷಣ ಆಗಲಿ ಅದರಲ್ಲಿ ಶ್ರದ್ಧೆ, ಭಕ್ತಿ, ವಿನಯತೆ ಮತ್ತು ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಂಡಿದ್ದರೇ ಮಾತ್ರ ಆ ವಿದ್ಯಾರ್ಥಿ ಗುರಿ ಸಾಧಿಸಬಹುದು ಎಂದು ಹೇಳಿದರು.
     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ಆರ್. ಪೂರ್ಣಿಮ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆಯುತ್ತಿದ್ದು, ಆದರೇ ನೀಟ್, ಜಿಇಇ, ಕೆ-ಸಿಇಟಿ ಪರೀಕ್ಷೆಯಲ್ಲಿ ನಾವುಗಳು ಅಂಕ ಪಡೆಯುವಲ್ಲಿ ತುಂಬ ಹಿಂದೆ ಉಳಿಯುತ್ತಿದ್ದೇವೆ. ಯಾವುದೇ ಪಠ್ಯವನ್ನು ಓದಿದರೇ ನಂತರ ಪುನರ್ ಹೇಳಬೇಕು. ನಮ್ಮ ವಿದ್ಯಾರ್ಥಿಗಳಲ್ಲಿ ಒಂದು ಕೆಟ್ಟ ಅಭ್ಯಾಸ ಹೊಂದಿದ್ದು, ಮೊಬೈಲ್ ಉಪಯೋಗಿಸುತ್ತೀದ್ದಿರಾ. ಅಗತ್ಯ ಇರುವಾಗ ಮಾತ್ರ ಮೊಬೈಲ್ ಉಪಯೋಗಿಸಿ, ಪ್ರಸ್ತುತದಲ್ಲಿ ಒಂದು ಗಂಟೆ ಓದಿದರೇ ಅರ್ಧಗಂಟೆಗಳ ಕಾಲ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿರುವುದು ಕಂಡು ಬರುತ್ತಿದೆ. ದಯಬಿಟ್ಟು ಅಂತಹ ಕೆಲಸ ಮಾಡಬಾರದು ಎಂದರು. ಎಲ್ಲಾರ ಮೊಬೈಲ್ ಸ್ವಿಚ್ ಆಫ್ ಮಾಡಿ ಮೊಬೈಲ್ ನೋಡುವ ಸಮಯದಲ್ಲಿ ಓದಿದ ಪಾಠವನ್ನು ಮನಸ್ಸಿನಲ್ಲಿ ಪುನರ್ ಉಚ್ಚರಿಸಿದರೇ ಅದು ನಿಮ್ಮಲ್ಲಿ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು. ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಸಿಗುವ ರಜೆ ದಿನಗಳನ್ನು ವ್ಯರ್ಥ ಮಾಡದೇ ಪುಸ್ತಕದ ಕಡೆ ಗಮನ ನೀಡಬೇಕು. ಹಿಂದಿನ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಿ ಮುಂದಿನ ಪೀಳಿಗೆಗೂ ಉತ್ತಮ ರೀತಿಯಲ್ಲಿ ನಿಡಬೇಕು. ಹಿಂದಿನ ಬಂದ ದಾರು ಬಗ್ಗೆ ಜಾಗೃತ ವಿದ್ದರೇ ಆತ ಮುಂದೆ ಎಡವುದಿಲ್ಲ ಎಂದು ಸಲಹೆ ನೀಡಿ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
      ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಠ ಎಂದರೇ ಸಾವಿರಾರು ಲಕ್ಷಾಂತರ ಮಕ್ಕಳಿಗೆ ವಿದ್ಯದಾನ ಮತ್ತು ಅನ್ನದಾಸೋಹ ಮಾಡಿದೆ. ನಾನು ಒಬ್ಬ ಶಾಸಕನಾಗಿ ಮಠದ ಯಾವುದೆ ಒಂದು ಕೆಲಸ ಕಾರ್ಯ ಇದ್ದರೇ ಮಠಕ್ಕೆ ಸಹಕಾರದೊಮದಿಗೆ ಉತ್ತಮವಾದ ಕೆಲಸ ಮಾಡುತೇನೆ. ನೆರೆದಿರುವ ವಿದ್ಯಾರ್ಥಿಗಳು ಮಠದ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

      ಕಾರ್ಯಕ್ರಮದಲ್ಲಿ ನೆನಪಿನ ಪುಸ್ತಕ ಬಿಡುಗಡೆ ಮಾಡಲಾಯಿತು ಇದೆ ವೇಳೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾಲೇಜಿನ ಆಡಳಿತಾಧಿಕಾರಿ ಎ.ಟಿ. ಶಿವರಾಮ್, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ಇತರರು ಉಪಸ್ಥಿತರಿದ್ದರು. ಬಿಜೆಪಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಸ್ವಾಗತಿಸಿದರು.

Post a Comment

Previous Post Next Post