ಹಾಸನ: ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿನ ಸಂಸದರ ಕಚೇರಿ ಉದ್ಘಾಟನೆಯ ಸಮಾರಂಭದಲ್ಲಿ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಭಾಗವಹಿಸಿದರು. ಹೊಸ ಕಚೇರಿಯ ಉದ್ಘಾಟನೆ ಸಂದರ್ಭದಲ್ಲಿ, ಸಂವಿಧಾನದ ಪೀಠಿಕೆಗೆ ಪುಷ್ಪಾರ್ಚನೆ ನಡೆಯಿತು. ಈ ಸಂದರ್ಭ, ಸಚಿವ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್ ದಂಪತಿ, ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾಧಿಕಾರಿಗಳು ಹಾಜರಿದ್ದರು.
ಮಾತನಾಡಿದ ಸಚಿವ ರಾಜಣ್ಣ, 25 ವರ್ಷಗಳ ಬಳಿಕ ಜಿಲ್ಲೆ ಹಿರಿಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಜನರನ್ನು ಅಭಿನಂದಿಸಿದರು. ಅವರು, ಶ್ರೇಯಸ್ ಪಟೇಲ್ ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿ, ಜನರ ವಿಶ್ವಾಸ ಗೆಲ್ಲಬೇಕೆಂದು ಆಶಿಸಿದರು.ಇದನ್ನು ಓದಿ: ರಾಜ್ಯ ಸರಕಾರ ಖಾಸಗೀ ಕಾಲೇಜುಗಳಲ್ಲಿ ನೇಮಕಾತಿಗೆ ನಿರ್ಲಕ್ಷ್ಯ, ಶೀಘ್ರ ಕ್ರಮ ಅಗತ್ಯ : ಹೆಚ್.ಡಿ. ರೇವಣ್ಣ
ಸಂಸದ ಶ್ರೇಯಸ್ ಪಟೇಲ್ ಅವರು, ತಮ್ಮ ಅಧಿಕಾರಾವಧಿಯುಲ್ಲಿಯೂ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಾರೆ ಮತ್ತು ವಾರಕ್ಕೆ ನಿಗದಿತ ಎರಡು ದಿನ ಕಚೇರಿಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸುವರು ಎಂದು ತಿಳಿಸಿದರು. ಅವರು, ಜಿಲ್ಲೆ ಅಭಿವೃದ್ಧಿಯೇ ಅವರ ಗುರಿಯಾಗಿದೆ ಎಂದು ಹೇಳಿದರು.
Tags
ಹಾಸನ