ಹಾಸನ: ವೆಡ್ಡಿಂಗ್ ಬೈ ದ್ರುವ ಹಾಗೂ ಹಾಸನಾಂಬ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಫರ್ಧೆಯಲ್ಲಿ ಮೂವರು ಸ್ಪರ್ಧಾಳುಗಳು ಪ್ರಶಸ್ತಿ ಪಡೆದಿದ್ದಾರೆ ಎಂದು ಹಾಸನಾಂಬ ಸ್ಪೋರ್ಟ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಆನಂದ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಹಾಸನದ ಎ.ಜೆ ಶ್ರೀನಿಧಿ ಎಂಬುವವರು ಅಗ್ರಸ್ಥಾನ ಪಡೆದು, ೨೦೨೪ ರ ಯುವರತ್ನ ಪ್ರಶಸ್ತಿ ಹಾಗೂ ಬೆಳ್ಳಿ ಗದೆ ಪಡೆದಿದ್ದಾರೆ.ದಾವಣಗೆರೆ ಮೂಲದ ರಾಹುಲ್ ಎಂಬುವವರು ಅತ್ಯುತ್ತಮ ಸ್ನಾಯುವಂತ ಎಂಬ ಬಿರುದು ಹಾಗೂ ಪ್ರಶಸ್ತಿಯನ್ನು ಪಡೆದಿದ್ದಾರೆ, ಬೆಳಗಾಂ ಮೂಲದ ನಾಗೇಂದ್ರ ಮಾಡಿವಾಳ್ ಎಂಬುವರು ಅತ್ಯುತ್ತಮ ಪ್ರದರ್ಶಕ ಸ್ಥಾನವನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಖ್ಯಾತ ವಡ್ಡಿಂಗ್ ಪ್ಲಾನರ್ ಹೆಚ್.ಪಿ. ದ್ರುವಕುಮಾರ್ ಹಾಗೂ ಕನ್ನಡದ ಖ್ಯಾತ ಚಲನಚಿತ್ರ ನಟಿ ಮಾನ್ವಿತಾ ಅವರು ಬಹುಮಾನ ನೀಡಿ ಗೌರವಿಸಿದ್ದಾರೆ.
ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.ಸುದ್ದಿಗೋಷ್ಟಿಯಲ್ಲಿ ಶಿವ ಕುಮಾರ್ ಇದ್ದರು.
Tags
ಹಾಸನ