ತೆಲುಗಿನ ಪುಷ್ಪ ದಿ ರೂಲ್ ಸಿನಿಮಾ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದೆ. ವಾರ ಕಳೆಯುವ ಮೊದಲೇ ಪುಷ್ಪ, 2000 ಕೋಟಿ ಕ್ಲಬ್ ಸೇರಿದೆ. ಬಿಡುಗಡೆಗೂ ಮೊದಲೇ ಸ್ಯಾಟಲೈಟ್, ಒಟಿಟಿ, ಮ್ಯೂಸಿಕ್, ಡಬ್ಬಿಂಗ್ ರೈಟ್ಸ್ ಎಂದು ಸಾವಿರ ಕೋಟಿ ಬಿಸಿನೆಸ್ ಮಾಡಿದ್ದ ಸಿನಿಮಾ ಪುಷ್ಪ 2. ಇದೀಗ ಥಿಯೇಟರ್ ಗಳಿಕೆಯಲ್ಲೂ 1000 ಕೋಟಿ ದಾಟಿದೆ.
ಅಲ್ಲು ಅರ್ಜುನ್ ನಟನೆ ಮತ್ತು ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ನಟನೆ, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಸುಕುಮಾರ್ ನಿರ್ದೇಶನ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಪುಷ್ಪ 2 ಸಿನಿಮಾ ತೆಲುಗು ಹಾಗೂ ಹಿಂದಿ ಬಿಟ್ಟರೆ ಅತೀ ಹೆಚ್ಚು ಕಲೆಕ್ಷನ್ ಮಾಡಿರುವುದು ಕರ್ನಾಟಕದಲ್ಲಿ ಎನ್ನುವುದು ವಿಶೇಷ.
ಪುಷ್ಪ 2 ಸಿನಿಮಾ ತೆಲುಗಿಗಿಂತ ಹೆಚ್ಚು ಹಿಂದಿಯಲ್ಲಿಯೇ ಗಳಿಕೆ ಮಾಡಿರುವುದು ವಿಶೇಷ. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಗಳಿಸಿರುವ ಪುಷ್ಪ, ತೆಲುಗಿನಲ್ಲಿಯೂ 400 ಕೋಟಿ ಗಳಿಸಿದೆ. ಆದರೆ ಹಿಂದಿ ವರ್ಷನ್ನಿಗಿಂತ ಕಡಿಮೆ. ಇನ್ನು ಇದೇ ಪುಷ್ಪ ಕರ್ನಾಟಕದಲ್ಲಿ ಸುಮಾರು 58 ಕೋಟಿ ಕಲೆಕ್ಷನ್ ಮಾಡಿದೆ. ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ತಮಿಳುನಾಡಿನಲ್ಲಿ 47 ಕೋಟಿ, ಕೇರಳದಲ್ಲಿ 14 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಕನ್ನಡದವರು ನಟ ಅಥವಾ ಚಿತ್ರತಂಡ ಕರ್ನಾಟಕ, ಕನ್ನಡಕ್ಕೆ ಕನಿಷ್ಠ ಗೌರವ ಕೊಡದೇ ಇದ್ದರೂ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಮತ್ತೊಮ್ಮೆ ಸಾಬೀತಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.