ಕೆಲ ದಶಕಗಳ ಹಿಂದೆ ಆಗಿನ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯದ ಓದಿನಲ್ಲಿ ತೊಡಗಿಸಿಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಓದುವ, ಬರೆಯುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಉದ್ಯಮಿ ಆನಂದ್ ಅವರು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಸಾಹಿತ್ಯ ಶ್ರಿ ಪ್ರಶಸ್ತಿಗೆ ಬಾಜನರಾಗಿರುವ ಚಲಂ ಹಾಡ್ಲಹಳ್ಳಿಯವರಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.
ಬೆಂಗಳೂರಿನ ರಾಜಾಜಿನಗರದ ರಾಯಲ್ ಕ್ಲಬ್ ನಲ್ಲಿ ವಂದೇ ಮಾತರಂ ಸಂಘಟನೆ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದ ಅವರು ಚಲಂ ಹಾಡ್ಲಹಳ್ಳಿಯಂತಹಾ ಯುವಕರು ಸಾಹಿತ್ಯ ಶ್ರೀ ಪ್ರಶಸ್ತಿ ಪಡೆಯುವ ಮಟ್ಟಿಗೆ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಲಂ ಹಾಡ್ಲಹಳ್ಳಿ ಸಾಹಿತ್ಯ ಗಟ್ಟಿಯಾಗಬೇಕಿದ್ದರೆ ಕನ್ನಡ ಚಳವಳಿ ಶಕ್ತವಾಗಿ ರೂಪುಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕನ್ನಡಪರ ಆಲೋಚನೆಯ ವಂದೇ ಮಾತರಂ ಸಂಘಟನೆ ಹೆಚ್ಚೆಚ್ಚು ಕೆಲಸ ಮಾಡುತ್ತಿದೆ ಎಂದರು. ಆಯಾ ಪ್ರದೇಶದ ಸಂಗತಿಗಳು ಸಾಹಿತ್ಯವಾದಾಗ ಸಾಹಿತ್ಯ ಕ್ಷೇತ್ರ ಗಟ್ಟಿಯಾಗಿ ಬೆಳೆಯುತ್ತದೆ ಎಂದರು.
ವಂದೇ ಮಾತರಂ ಸಂಘಟನೆಯ ಅಧ್ಯಕ್ಷರಾದ ಧರ್ಮರಾಜ ಕಡಗ ಅವರು ಮಾತನಾಡಿ ಕನ್ನಡಪರವಾದ ನೈಜ ದನಿಗಳು ಎಲೆಮರೆ ಕಾಯಿಯಾಗಿ ಕೆಲಸ ಮಾಡುತ್ತಿವೆ. ಅಂತಹಾ ಪ್ರಾಮಾಣಿಕ ಕನ್ನಡದ ಮನಸ್ಸುಗಳು ಮುನ್ನೆಲೆಗೆ ಬರಬೇಕಿದೆ ಎಂದರಲ್ಲದೇ ಚಲಂ ಹಾಡ್ಲಹಳ್ಳಿ ಅವರನ್ನು ಗುರುತಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶೇಖರ್ ಗೌಡ, ದಯಾ ಗಂಗನಘಟ್ಟ, ಶ್ರೀಧರ್, ಶಿವೇಗೌಡ, ವೃಂದಾಮಣಿ, ಕಾಂತರಾಜಪುರ ಸುರೇಶ್, ಆನಂದಕುಮಾರ್, ಲೋಕೇಶ್ ಇನ್ನೂ ಮುಂತಾದವರು ಹಾಜರಿದ್ದರು.