ಚನ್ನರಾಯಪಟ್ಟಣ: ಕಂಟ್ರಾಕ್ಟರ್ ಕ್ಲಬ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಲಾಯಿತು. ಪಟ್ಟಣದ ಮೂರನೇ ವಾರ್ಡಿನಲ್ಲಿರುವ ಕಂಟ್ರಾಕ್ಟರ್ ಕ್ಲಬ್ ನ 21ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನೂತನವಾಗಿ ಕುಡಿಯುವ ನೀರು ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎಸ್ ಬಿ ಜಗದೀಶ್ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಚನ್ನರಾಯಪಟ್ಟಣ ತಾಲೂಕು ಕಾಂಟ್ರಾಕ್ಟರ್ ಕ್ಲಬ್ ವತಿಯಿಂದ ಕುಡಿಯುವ ಶುದ್ಧ ನೀರಿನ ಘಟಕವನ್ನು ಪ್ರಾರಂಭ ಮಾಡಲಾಗಿದೆ ಎಂದರು.
ನಗರದ ಜನತೆಗೆ ಶುದ್ಧವಾದ ನೀರನ್ನು ಪೂರೈಕೆ ಮಾಡುವ ಉದ್ದೇಶದಿಂದ ಶುದ್ಧ ನೀರಿನ ಘಟಕವನ್ನು 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ, ಪಟ್ಟಣದ ನಾಗರಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕುಡಿಯುವ ಶುದ್ದ ನೀರಿನ ಘಟಕಕ್ಕೆ ಪುರಸಭೆಯ ವತಿಯಿಂದ ನಿರಂತರವಾಗಿ 42*7 ನೀರಿನ ಸೌಲಭ್ಯವನ್ನು ಕಲ್ಪಿಸಿರುವ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಬನಶಂಕರಿ ರಘು ಹಾಗೂ ಮೂರನೇ ವಾರ್ಡಿನ ಪುರಸಭಾ ಸದಸ್ಯರಾದ ಮೋಹನ್ ರವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಸಿ ಎಸ್ ಶಂಕರೇಗೌಡ,ಕಂಟ್ರಾಕ್ಟರ್ ಕ್ಲಬ್ ಅಧ್ಯಕ್ಷರಾದ ಶ್ರವಣಬೆಳಗೊಳ ಜಗದೀಶ್,ಉಪಾಧ್ಯಕ್ಷ ಜೆ. ಆರ್ ರಮೇಶ್, ಕಾರ್ಯದರ್ಶಿ ಧರ್ಮೇಂದ್ರ, ಸಹ ಕಾರ್ಯದರ್ಶಿ ಕೆಂಪೇಗೌಡ, ಖಜಾಂಚಿ ಸಿ ಕೆ ನರೇಂದ್ರಬಾಬು, ನಿರ್ದೇಶಕರುಗಳಾದ ಜಯರಾಮ್, ದೇವರಾಜೇಗೌಡ, ನಟರಾಜ್, ರಾಮಕೃಷ್ಣ, ಸತೀಶ್, ನಂಜೇಗೌಡ, ಯೋಗೇಶ್, ಮಂಜೇಗೌಡ, ಹಿರಿಯ ಸದಸ್ಯರುಗಳಾದ ಶ್ರೀಕಂಠಪ್ಪ, ಎಂ ಕೆ ಮಂಜೇಗೌಡ, ಕುಂಬಾರಹಳ್ಳಿ ರಮೇಶ್, ಅಗ್ರಹಾರ ಲಕ್ಕೇಗೌಡ, ಅಶೋಕ್, ತಮ್ಮಯಣ್ಣ, ಸೇರಿದಂತೆ ಇತರರು ಹಾಜರಿದ್ದರು.