ಹಾಸನ: ನಗರದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್, ಬೆಂಗಳೂರಿನ ಯುಎಸ್ ಕಮ್ಯುನಿಕೇಶನ್ ಆಶ್ರಯದಲ್ಲಿ ಡಿ.೨೦ ರಿಂದ ಮೂರು ದಿನಗಳ ಕಾಲ ಬ್ಯುಲ್ಡ್ ಟೆಕ್-೨೦೨೪ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್‌ಡಿಸಿಸಿಇ ಅಂಡ್ ಎ ಅಧ್ಯಕ್ಷ ಆರ್. ಬಾಬು ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಟ್ಟಡ ಸಾಮಗ್ರಿಗಳ ಇಂಟೀರಿಯರ್ಸ್ ಎಕ್ಸ್ಟೀರಿಯರ್ಸ್ ಹೋ ಲೋನ್ ಮತ್ತು ಫರ್ನೀಚರ್ಸ್ ಬೃಹತ್ ವಸ್ತು ಪ್ರದರ್ಶನ ಇರಲಿದೆ ಎಂದರು. ಉತ್ಕೃಷ್ಟಮಟ್ಟದ ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಸರಳ ಮತ್ತು ಸುಲಭವಾಗಿ ಕೈಗೆಟುವಂತೆ ಕಟ್ಟಡ ಸಾಮಗ್ರಿ ಒಂದೇ ಸೂರಿನಡಿ ಸಿಗುವಂತೆ ಮಾಡುವುದು ಇದರ ಉದ್ದೇಶ. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿರಲಿದೆ. ಸುಮಾರು ದೇಶ-ವಿದೇಶಗಳ ಸುಮಾರು ೭೦ಕ್ಕೂ ಹೆಚ್ಚು ಮಳಿಗೆ ಭಾಗಿಯಾಗಲಿವೆ. ಮನೆಕಟ್ಟಲು ಯೋಜಿಸಿರುವವರು, ಮನೆ ಕಟ್ಟಿರುವವರು ಕಾರ್ಯಕ್ರಮಕ್ಕೆ ಬಂದು ಸದುಪಯೋಗ ಪಡೆದುಕೊಳ್ಳಬಹುದು ಎಂದರು. ಏಕೆಂದರೆ ಮನೆ ಕಟ್ಟಬೇಕು ಅಥವಾ ಕಟ್ಟಿರುವವರಿಗೆ ಎಲ್ಲಾ ರೀತಿಯ ಐಡಿಯಾ ಇರುವುದಿಲ್ಲ. ಇಂಥವರು ಬಂದು ಪೂರಕ-ಸಲಹೆ ಸೂಚನೆ ಪಡೆಯಬಹುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಯೋಗನಾಥ್, ಮಾಜಿ ಅಧ್ಯಕ್ಷ ಮುರಳೀಧರ್, ಬೆಂಗಳೂರಿನ ಉಮಾಪತಿ, ಪ್ರಧಾನ ಕಾರ್ಯದರ್ಶಿ ತ್ರಿಭುವನ್, ಖಜಾಂಚಿ ಆಕಾಶ್ ಇದ್ದರು.
Tags
ಹಾಸನ