ಕಟ್ಟಿನಕೆರೆ ಮಾರುಕಟ್ಟೆಯ ದಿನಸಿ ಅಂಗಡಿಯಲ್ಲಿ ನಗದು ಕಳ್ಳತನ

 ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆಯ ದಿನಸಿ ಅಂಗಡಿಯ ಬೀಗ ಹೊಡೆದು ನಗದು ಕಳ್ಳತನ ಮಾಡಿರುವ ಘಟನೆ ನೆನ್ನೆ ರಾತ್ರಿ ನಡೆದಿದೆ. ಸಂಗಾತಿ ಪ್ರವಿಜನ್ ಸ್ಟೋರ್ ನಲ್ಲಿ ಈ ಘಟನೆ ನಡೆದಿದ್ದು ನೆನ್ನೆ ಸಂಜೆ ವ್ಯಾಪಾರ ಎಲ್ಲಾ ಮುಗಿದ ನಂತರ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದ ವೇಳೆ ಕೈ ಚಳಕ ತೋರಿರುವ ಕಳ್ಳರು ಲಕ್ಷಾಂತರ ರುಪಾಯಿ ಹಣ ಕಳ್ಳತನ ಮಾಡಿ ಎಸ್ಕೀಪ್ ಆಗಿದ್ದಾರೆ.

ಈ ಬಗ್ಗೆ ಅಂಗಡಿ ಮಾಲೀಕ ವೆಂಕಟೇಶ್ ಮಾತನಾಡಿ, ನೆನ್ನೆ ಅಂಗಡಿ ವ್ಯಾಪಾರ ಮುಗಿದ ನಂತರ ರಾತ್ರಿ 9 ಗಂಟೆಗೆ ಮನೆಗೆ ತೆರಳಿದ್ದು ಬೆಳಿಗ್ಗೆ ಎಂದಿನಂತೆ 7 ಗಂಟೆಗೆ ಬಂದು ನೋಡಲಾಗಿ ಅಂಗಡಿಯ ಒಂದು ಬದಿಯ ಬೀಗ ಹೊಡೆದು ಹಣ ಕಳ್ಳತನ ಮಾಡಿದ್ದಾರೆ ಎಂದರು.



ಈ ಹಿಂದೆ ಯಾವತ್ತೂ ಈ ರೀತಿಯ ಘಟನೆ ನಡೆದಿರಲಿಲ್ಲ  ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದ್ದು ಅಂಗಡಿಯಲ್ಲಿ ಇಟ್ಟಿದ್ದ 1.5 ಲಕ್ಷ ನಗದು ಕಳ್ಳತನವಾಗಿದೆ. ಈ ಬಗ್ಗೆ ಈಗಾಗಲೇ ಹಾಸನ ನಗರ  ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.

ಹೂಡ ಮಾಜಿ ನಿರ್ದೇಶಕ ಮೋಹನ್ ಮಾತನಾಡಿ, ಕಟ್ಟಿನ ಕೆರೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಳ್ಳತನ ಪ್ರಕರಣಗಳು ಕಡಿಮೆ, ಆದರೆ ಇಂದು ಈ ಅಹಿತಕರ ಘಟನೆ ನಡೆದಿರುವುದು ಬೇಸರ ತಂದಿದೆ, ಎಂದಿಂದಂತೆ ನೆನ್ನೆ ರಾತ್ರಿಯೂ ಸುಮಾರು 1 ಗಂಟೆಗೆ ಪೊಲೀಸ್ ಬೀಟ್ ನಡೆದಿದೆ ಎಂದು ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ ಎಂದರು.

ಅಂಗಡಿಯಲ್ಲಿ ಇನ್ನಿತರ ಬೆಲೆಬಾಳುವ ವಸ್ತುಗಳು ಇದ್ದರೂ ಅವುಗಳನ್ನೆಲ್ಲ ಬಿಟ್ಟು ಕೇವಲ ಹಣವನ್ನು ಮಾತ್ರ ಕಳ್ಳತನ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು ಜೊತೆಗೆ ಪ್ರತೀ ಅಂಗಡಿ ಮಾಲೀಕರು ಕೂಡ ತಮ್ಮ ಅಂಗಡಿಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

Post a Comment

Previous Post Next Post