ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದವರ ಮೇಲೆ ಪುರಸಭೆ ವ್ಯಾಪ್ತಿಯಲ್ಲಿ ೮೩ ಸಾವಿರ ದಂಡವನ್ನು ವಿಧಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸುಜಯ್ ತಿಳಿಸಿದರು.
ರ‍್ಕಾರ ಈಗಾಗಲೇ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಕಡ್ಡಾಯ ಮಾಡಿದರೂ ಸಹ
ಸರ‍್ವಜನಿಕರಿಗೆ ಹಾಗೂ ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಲ್ಲಿ ಸೂಕ್ತ ರೀತಿಯಲ್ಲಿ ಸಾಮಾಜಿಕ ಅಂತರ ಪಾಲನೆಮಾಡದವರ ಮೇಲೆ ಸಾಂಕ್ರಾಮಿಕ ರೋಗ ನರ‍್ಭಂದ ಕಾಯ್ದೆ ೨೦೨೦ ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಡಿಸೆಂಬರ್ ನಿಂದ ಏಪ್ರೀಲ್ ವರೆಗೂ ಸುಮಾರು ೮೩ ಸಾವಿರ ರೂಗಳ ವರೆಗೂ ದಂಡ ವಿಧಿಸಲಾಗಿದೆ ಎಂದು ಮುಖ್ಯಾಧಿಕಾರಿ ಸುಜಯ್ ತಿಳಿಸಿದರು.
ಈ ಸಂರ‍್ಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪುರಸಭಾ ವ್ಯಾಪ್ತಿಯಲ್ಲಿ ಇರುವಂತಹ ವಾಣಿಜ್ಯ ಮಳಿಗೆಗಳು,ಕಲ್ಯಾಣ ಮಂಟಪದಲ್ಲಿ ಸೂಕ್ತ ರೀತಿಯಲ್ಲಿ ಕೋವೀಡ್ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಮಾಹಿತಿ ನೀಡಲಾಗಿದ್ದು,ಎಲ್ಲಿಯೂ ಗುಂಪುಗೂಡಿ ಸರ‍್ವಜನಿಕರು ಸೇರದಂತೆ ಎಚ್ಚರಿಕೆನೀಡಲಾಗಿದೆ.ಪ್ರತೀ ವರ‍್ಡ್ ಗಳಿಗೆ ಪುರಸಭಾ ವಾಹನದಲ್ಲಿ ಕರಪತ್ರ ನೀಡುವ ಮೂಲಕ ಪ್ರಚಾರ ಮಾಡಲಾಗುತ್ತಿದ್ದು,ಆದರೂ ಸಹ ನಿಯಮಗಳನ್ನು ಮೀರಿದವರ ಮೇಲೆಕಠಿಣ ಕ್ರಮ ಕೈಗೊಳ್ಳಲಾಗಿದೆ.ಪ್ರತೀ ವಾಣಿಜ್ಯ ಮಳಿಗೆಗಳಲ್ಲಿ ೩ ಅಡಿಗಳ ಬಾಕ್ಸ್ ನರ‍್ಮಾಣ ಮಾಡಲು ಸೂಚಿಸಲಾಗಿದೆ.
ರ‍್ಕಾರ ೪೫ ರ‍್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಕೊಡಿಸಲಿದ್ದು ಅದನ್ನು ಪ್ರತಿಯೊಬ್ಬರೂ ಪ್ರಯೋಜನ ಪಡೆಯಬೇಕು.ಸ್ವಚ್ಚತೆಗೆ ಪ್ರತೀ ವರ‍್ಡ್ ಗಳಿಗೂ ಸ್ವಚ್ಚತೆ ಕಾಪಾಡುವ ಉದ್ದೇಶದಿಂದ ಕಸವನ್ನು ವಾಹನಕ್ಕೆ ಹಾಕಬೇಕು ಇದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು.ನಮ್ಮೊಂದಿಗೆ ಜನರು ಸಹಕರಿಸಬೇಕು ಎಂದು ತಿಳಿಸಿದರು.
ಇದೇ ಸಂರ‍್ಭದಲ್ಲಿ ಪುರಸಭೆಯ ಆರೋಗ್ಯ ಅಧಿಕಾರಿ ಲೋಹಿತ್,ಪರಿಸರ ಅಭ್ಯಂತರರಾದ ಮಧುಸೂದನ್, ಇಂಜಿನಿಯರ್ ಪುರುಷೊತ್ತಮ್,ಕುಮಾರ್,ಉಮೇಶ್,ರಂಗಸ್ವಾಮಿ ಹಾಜರಿದ್ದರು.
