ರಾಜ್ಯಾದ್ಯಂತ ಆಕ್ಸಿಜನ್ ಅಭಾವ ಉಂಟಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಎಲ್ಲಾ ರೀತಿಯ ಪರ‍್ವ ತಯಾರಿ ಮಾಡಿಕೊಂಡಿದ್ದು,ಆಕ್ಸಿಜನ್ ಕೊರತೆ ಆಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಕೆಲ ಅಂಗಡಿಗಳಲ್ಲಿ ಇದ್ದ ಜಂಬೋ ಸಿಲಿಂಡರ್ ಗಳನ್ನು ಅಂಗಡಿ ಮಾಲೀಕರ ಮನವೊಲಿಸಿ ಅಸ್ಪತ್ರೆಗೆ ತಂದು ಆಕ್ಸಿಜನ್ ಕೊರತೆ ನೀಗಿಸಲು ಮುಂದಾದರು.
ಪಟ್ಟಣದಲ್ಲಿ ಗ್ಯಾಸ್ ವೆಲ್ಡಿಂಗ್ ,ಸೋಡಾ ಫ್ಯಾಕ್ಟರಿ ,ಐಸ್ ಕ್ರೀಂ ಪ್ಯಾಕ್ಟರಿ ಸೇರಿದಂತೆ ಇನ್ನಿತರೆ ಕಡೆ ಇದ್ದಂತಹ ಜಂಬೋ ಸಿಲಿಂಡರ್ ಗಳನ್ನು ತಹಶೀಲ್ದಾರ್ ಎನ್ ವಿ ನಟೇಶ್ ಹಾಗೂ ಸಿಪಿಐ ಶ್ರೀಕಾಂತ್, ಪಿಎಸ್ಐ ಎಸ್ ಜಿ ಪಾಟೀಲ್ ಅವರು ಮಾಲೀಕರ ಮನವೊಲಿಸಿ ಆಸ್ಪತ್ರೆಗೆ ಬೇಕಾಗಿದ್ದ ತರ‍್ತಾಗಿ ಬೇಕಾಗಿದ್ದ ಆಕ್ಸಿಜನ್ ವ್ಯವಸ್ಥೆಕಲ್ಪಿಸಿದ್ದಾರೆ.
ನಂತರಮಾತನಾಡಿದ ತಹಶೀಲ್ದಾರ್ ಎನ್ ವಿ ನಟೇಶ್ ಇತ್ತೀಚಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಯಾವುದೇ ರೀತಿಯ ಸಮಸ್ಯೆ ಉಲ್ಬಣವಾಗದಂತೆ ಗ್ಯಾರೇಜ್ ಮತ್ತು ವೆಲ್ಡಿಂಗ್ ಶಾಪ್ ನಲ್ಲಿ ಇದ್ದ ೨೯ ಜಂಬೂ ಸಿಲೆಂಡರ್ ಗಳನ್ನು ಮಾಲಿಕರ ಬಳಿ ರ‍್ಚಿಸಿ ತಂದು ರ‍್ಕಾರಿ ಆಸ್ಪತ್ರೆ ವೈಧ್ಯಾಧಿಕಾರಿಗಳಿಗೆ ನೀಡಿದ್ದೇವೆ ಎಂದರು.
ಸಿಪಿಐ ಶ್ರೀಕಾಂತ್ ಮಾತನಾಡಿ ತಾಲೂಕಿನಲ್ಲಿ ಯಾರಾದರ ಬಳಿ ಜಂಬೂ ಸಿಲೆಂಡರ್ ಇದ್ದಂತವರು ನಮ್ಮನ್ನು ಸಂರ‍್ಕಿಸಿ.ಕೋವೀಡ್ ತರ‍್ತು ಸಂರ‍್ಭದಲ್ಲಿ ನೀವೂ ಕೂಡ ಸಹಾಯ ಮಾಡಿದಂತಾಗುತ್ತದೆ.ತಾಲೂಕಿನ ಆಸ್ಪತ್ರೆ ಗಳಲ್ಲಿ ತರ‍್ತು ಸೇವೆಗೆ ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕು ಆಡಳಿತ ಅಧಿಕಾರಿ ಡಾ ವಿಜಯ್ ಮಾತನಾಡಿ ಕೋವೀಡ್ ತರ‍್ತು ಸಂರ‍್ಭದಲ್ಲಿ ತಾಲೂಕು ಆಡಳಿತ ಪ್ರತೀ ಬಾರಿಯೂ ನಮ್ಮ ಜೊತೆ ಕೈ ಜೋಡಿಸಿರುವುದು ಶ್ಲಾಘನೀಯ.
ಆಕ್ಸಿಜನ್ ಕೊರತೆಯಿಂದ ಎಷ್ಟೋ ರೋಗಿಗಳು ಮೃತಪಟ್ಟಿರುವುದು ಮಾಧ್ಯಮ ಮೂಲಕ ನೋಡುತ್ತಿದ್ದೇವೆ.ಸ್ವಂತ ಅಂಗಡಿಗಳಲ್ಲಿ ಬಳಸುತ್ತಿದ್ದ ಜಂಬೂ ಸಿಲೆಂಡರ್ ಗಳನ್ನು ಪಡೆದುಕೊಂಡು ನಮಗೆ ನೀಡುತ್ತಿದ್ದಾರೆ.ತರ‍್ತಾಗಿ ರೋಗಿಗಳಿಗೆ ನೀಡಲು ಉಪಾಯೋಗವಾಗಿದೆ ಎಂದು ತಿಳಿಸಿದರು.
ವೈಧ್ಯಾಧಿಕಾರಿ ಡಾ,ನರಸೇಗೌಡ ಮಾತನಾಡಿ ನಮಗೆ ೫ ದಿನಗಳವರೆಗೆ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಇಲ್ಲ.ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ೩೫ ರೋಗಿಗಳಿದ್ದು ಅದರಲ್ಲಿ ತರ‍್ತಾಗಿ ೨೦ ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.ನಮಗೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಜಿಲ್ಲಾಡಳಿತದಿಂದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ.ಈಗಿರುವ ಜಂಬೂ ಸಿಲೆಂಡರ್ ನಮಗೆ ತುಂಬಾ ಉಪಯೋಗವಾಗಿದೆ ಎಂದು ತಿಳಿಸಿದರು.
ಈ ಸಂರ‍್ಭದಲ್ಲಿ ಪಿಎಸ್ಐ ಎಸ್ ಜಿ ಪಾಟೀಲ್, ಆರಕ್ಷಕ ಸಿಬ್ಬಂದಿ ಮನು ಹಾಜರಿದ್ದರು.