ಪಟ್ಟಣದ ಇಂದಿರಾ ಕ್ಯಾಂಟೀನ್ ನಲ್ಲಿ ಹಲವು ದಿನಗಳಿಂದ ಸಿಸಿಟಿವಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸರಿಇಲ್ಲ ಎಂಬ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆಗೆ ಆಗಮಿಸಿದ ಜಿಲ್ಲಾಧಿಕಾರಿಗಳ ಕಚೇರಿಯ ಯೋಜನಾ ಅಧಿಕಾರಿ ನರ‍್ದೇಶಕ ಮಂಜುನಾಥ್ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು ಈಗಾಗಲೇ ಕೋವೀಡ್ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ರಾಜ್ಯ ರ‍್ಕಾರ ನರ‍್ಗತಿಕರಿಗೆ ಕೂಲಿ ಕರ‍್ಮೀಕರಿಗೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು,ಅದನ್ನು ಜಿಲ್ಲೆಯ ಎಲ್ಲಾ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತವಾಗಿ ನೀಡಲಾಗುತ್ತಿದೆ.ತಾಲೂಕಿನಲ್ಲಿ ಇರುವಂತಹ ಇಂದಿರಾ ಕ್ಯಾಂಟೀನ್ ನಲ್ಲಿ ಮೂಲಭೂತ ಸೌರ‍್ಯಗಳ ಕೊರತೆ ಇದೆ ಎಂಬ ದೂರಿನ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ.ಶಿಥಿಲಗೊಂಡಿದ್ದ ಎಲೆಕ್ಟ್ರಾನಿಕ್ ಕೆಲಸಗಳನ್ನು ಪುರಸಭೆಯವರು ಮಾಡುತ್ತಿದ್ದು ,ಸಿಸಿಕ್ಯಾಮರಾ ದುರಸ್ಥಿಯಾಗಬೇಕಿದೆ.ಮಳೆಗಾಳದ ಸಂರ‍್ಭದಲ್ಲಿ ಶೀತವಾದ ಕಾರಣ ಅವುಗಳನ್ನು ಶೀಘ್ರದಲ್ಲೇ ದುರಸ್ಥಿಗೊಳಿಸುವಂತೆ ಸೂಚಿಸಲಾಗಿದೆ.ಪ್ರತಿನಿತ್ಯ ಊಟ ಉಪಹಾರವನ್ನು ಉಚಿತವಾಗಿ ಕಡು ಬಡವರಿಗೆ ಹಾಗೂ ನರ‍್ಗತಿಕರಿಗೆ ಕೊಡುವಂತೆ ಸೂಚನೆ ನೀಡಲಾಗಿದೆ ಎಂದರು.
ಮುಖ್ಯಾಧಿಕಾರಿ ಸುಜಯ್ ಮಾತನಾಡಿ ಪ್ರತಿನಿತ್ಯ ೫೦ ಕ್ಕೂ ಹೆಚ್ಚು ಬೇಲೂರಿನಲ್ಲಿರುವ ನರ‍್ಗತಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.ಅದರಂತೆ ಕೂಲಿ ಕರ‍್ಮಿಕರು ಹಾಗೂ ಬಡರ‍್ಗದವರಿಗೆ ನೀಡಲಾಗುತ್ತಿದೆ.ಕೆಲವು ಸಣ್ಣಪುಟ್ಟ ಮೂಲಭೂತ ಸೌರ‍್ಯಗಳನ್ನು ಪುರಸಭೆ ಕೈಗೆತ್ತಿಕೊಂಡಿದ್ದು ಬರುವಂತಹ ಪ್ರತಿಯೊಬ್ಬರಿಗೂ ಬಿಸಿನೀರು ಕೊಡುವುದರ ಜೊತಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ವಚ್ಚತೆಗೆ ಆಧ್ಯತೆವನೀಡಲಾಗಿದೆ ಎಂದರು.
ಈ ಸಂರ‍್ಭದಲ್ಲಿ ಪುರಸಭೆ ಪರಿಸರ ಅಭ್ಯಂತರರಾದ ಮಧುಸೂದನ್, ಇಂಜಿನಿಯರ್ ಪುರುಷೊತ್ತಮ್,ಆರೋಗ್ಯ ಅಧಿಕಾರಿ ಲೋಹಿತ್,ಕರ‍್ಯಪಾಲಕ ಅಭಿಯಂತರ ಶಿವಾನಂದ್ ಹಾಜರಿದ್ದರು