ಕೋವೀಡ್ ಹಿನ್ನಲೆಯಲ್ಲಿ ನಿಗದಿತ ಸಮಯ ಮುಗಿದರೂ ಅಡ್ಡಾದಿಡ್ಡಿ ಸಂಚರಿಸುತ್ತಿದ್ದ ಓಡಾಡುತ್ತಾ ದ್ವಿಚಕ್ರ ವಾಹನ ಸವಾರರಿಗೆ ವೃತ್ತ ನಿರೀಕ್ಷಕ ಶ್ರೀಕಾಂತ್ ಬಸ್ಕಿ ಹೊಡೆಸುವ ಮೂಲಕ ಕಡ್ಡಾಯವಾಗಿ ರ‍್ಕಾರದ ಆದೇಶವನ್ನು ಪಾಲಿಸುವಂತೆ ಸೂಚಿಸಿದರು.
ಪಟ್ಟಣದ ನೆಹರೂ ವೃತ್ತದ ಬಳಿ ಅಡ್ಡಾದಿಡ್ಡಿಯಾಗಿ ನಿಗದಿತ ಸಮಯ ಮುಗಿದ್ದಿದ್ದರೂ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ೨೦ ಕ್ಕೂ ಹೆಚ್ಚೂ ವಾಹನಗಳನ್ನು ತಡೆದು ಸವಾರರಿಗೆ ಯಾವುದೇ ಕಾರಣಕ್ಕೂ ಸುಮ್ಮನೆ ಓಡಾಡುತ್ತಿದ್ದೀರಾ ,ಅಲ್ಲದೆ ದಿನದಿಂದ ದಿನಕ್ಕೆ ಎರಡನೇ ಕೋವೀಡ್ ಅಲೆ ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ರ‍್ಕಾರದ ನರ‍್ದೇಶನದ ಸುತ್ತೊಲೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.ನಿಮ್ಮ ಆರೋಗ್ಯದ ದೃಷ್ಟಿಯಿಂದ ಯಾರೂ ಓಡಾಡಬೇಡಿ,ಇಂದು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ೧೦ ಬಸ್ಕಿ ಶಿಕ್ಷೆ ನೀಡಲಾಗುತ್ತಿದೆ.ನಾಳೆಯಿಂದ ಯಾರಾದರೂ ಅನಾವಶ್ಯಕ ಓಡಾಡಿದರೆ ವಾಹನ ವಶಕ್ಕೆ ಪಡೆದು ದಂಡ ವಿಧಿಸಲಾಗುವುದು ಎಂದು ಸಿಪಿಐ ಶ್ರೀಕಾಂತ್ ಎಚ್ಚರಿಸಿದರು.
ನಂತರ ಮಾತನಾಡಿದ ವೈಧ್ಯಾಧಿಕಾರಿ ಡಾ ನರಸೇಗೌಡ ದಿನದಿಂದ ದಿನಕ್ಕೆಕೋವೀಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ.ಅದ್ದರಿಂದ ತಮ್ಮ ಕೆಲಸವನ್ನು ಬೇಗ ಮುಗಿಸಿ ಪಟ್ಟಣಕ್ಕೆ ಹೆಚ್ಚಾಗಿ ಬರಬಾರದು ಎಂದಮನವಿ ಮಾಡಿದರು.
ಈ ಸಂರ‍್ಭದಲ್ಲಿ ಎಎಸ್ಐ ಚಲುವರಾಜ್,ಮೂಡಲಗಿರಿಗೌಡ,ವಿರೂಪಾಕ್ಷ, ನಂದೀಶ್,
ಸೋಮಶೇಖರ್,
ಸಿಬ್ಬಂದಿಗಳು ಹಾಜರಿದ್ದರು.