ಮಲ್ಲಾಪುರ ಗ್ರಾಮದಲ್ಲಿ ರ‍್ಕಾರಿ ಐಟಿಐ ಕಾಲೇಜ್ ಪ್ರಾರಂಭವಾದರೂ ಸೂಕ್ತ ರಸ್ತೆ ಇಲ್ಲದೆ ಗುಂಡಿ ಬಿದ್ದು ಹಾಳಾಗಿದ್ದು ವಿದ್ಯಾರ್ತಿಗಳು ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದು,ಶಾಸಕರು ಇತ್ತ ಗಮನ ಹರಿಸಿ ರಸ್ತೆಗೆ ಕಾಯಕಲ್ಪ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನೂತನವಾಗಿ ನರ‍್ಮಿಸಿರುವ ರ‍್ಕಾರಿ ಐಟಿಐ ಕಾಲೇಜ್ ಪ್ರಾರಂಭವಾಗಿದ್ದು ವಿಧ್ಯರ‍್ಥಿಗಳಿಗೆ ಸರಿಯಾದ ರಸ್ತೆ ಸೌಲಭ್ಯ ಇಲ್ಲದೆ ಇಲ್ಲಿಗೆ ಬರಲು ಹಿಂದೇಟು ಹಾಕುವಂತ ಪರಿಸ್ಥಿತಿ ನರ‍್ಮಾಣವಾಗಿದೆ, ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು . .
ಈ ಸಂರ‍್ಭದಲ್ಲಿ ಮಾತನಾಡಿದ ಸನ್ಯಾಸಿಹಳ್ಳಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಅಣ್ಣೇಗೌಡ ಮಾತನಾಡಿ ಕೇಂದ್ರ ಹಾಗೂ ರಾಜ್ಯರ‍್ಕಾರದ ಅನುದಾನದಲ್ಲಿ ರ‍್ಕಾರಿ ಜಾಗದಲ್ಲಿ ಐಟಿಐ ಕಾಲೇಜ್ ಕಟ್ಟಿದ್ದು,ಸುಮಾರು ೩ ಕೋಟಿ ರೂ ಗಿಂತಲೂ ಹೆಚ್ಚು ಕಟ್ಟಡ ನರ‍್ಮಾಣಕ್ಕೆ ರ‍್ಚಾಗಿದ್ದು,ಈ ಹಿಂದೆ ಇದ್ದ ಶಾಸಕರಾಗಿದ್ದ ರುದ್ರೇಶ್ ಗೌಡರ ಕಾಲದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದು, ಈಗಿನ ಶಾಸಕರಾದ ಕೆ ಎಸ್ ಲಿಂಗೇಶ್ ಅವರು ಉದ್ಘಾಟನೆ ಮಾಡಿದ್ದರು.ಈಗಿರುವ ಐಟಿಐ ಕಾಲೇಜ್ ಹಿಂಭಾಗ ಇನ್ನೊಂದು ೩ ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ದೊಂದಿಗೆ ಇನ್ನೊಂದು ಕಟ್ಟಡ ಕಟ್ಟುತ್ತಿದ್ದಾರೆ.ವಿದ್ಯರ‍್ಥಿಗಳ ಅನುಕೂಲಕ್ಕಾಗಿ ಇಲ್ಲಿ ಕಾಲೇಜು ಕಟ್ಟುತ್ತಿರುವುದು ಸಂತೋಷ, ಆದರೆ ಇಲ್ಲಿ ವಿಧ್ಯರ‍್ಥಿಗಳು ತಿರುಗಾಡಲು ಸೂಕ್ತ ರಸ್ತೆಸಂರ‍್ಕ ಇಲ್ಲದೆ ರಸ್ತೆ ಕಿರಿದಾಗಿದ್ದು ಓಡಾಡಲು ಸಹ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.ಅದರಲ್ಲೂ ಕಾಲೇಜಿನ ಪ್ರಾಂಶುಪಾಲರು,ಸಿಬ್ಬಂದಿ ರ‍್ಗದವರು,ವಿಧ್ಯರ‍್ಥಿಗಳು ರಸ್ತೆಯಲ್ಲಿ ತಿತುಗಾಡಬೇಕಾದರೆ ಗುಂಡಿ ಬಿದ್ದ ರಸ್ತೆ, ನೀರು ತುಂಬಿದ ಕೆಸರಿನಲ್ಲೇ ಓಡಾಡಬೇಕು,ಹಾಗೆ ಹೋದಾಗ ಎಲ್ಲಿಯಾದರೂ ಎಡವಿದರೆ ಬಟ್ಟೆ ತುಂಬಾ ಕೆಸರು ಮಯ ಅದರಲ್ಲೂ ಮಳೆಗಾಲದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಬಿಟ್ರವಳ್ಳಿಯಿಂದ ಕೇವಲ ರ‍್ಧ ಕಿಮೀ ಡಾಂಬರೀಕರಣ ಮಾತ್ರ ಮಾಡಿದ್ದು ಇನ್ನು ಉಳಿದಿದ್ದು ಗುಂಡಿ ಬಿದ್ದ ರಸ್ತೆಗಳು ಕಣ್ಣಿಗೆ ಗೋಚರಿಸುತ್ತದೆ.ಸ್ಥಳೀಯ ಶಾಸಕರು ಇತ್ತ ಗಮನ ಹರಿಸಿ ತಮ್ಮ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಿಸಬೇಕು.ಕಾಲೇಜು ವಾಹನ ಬಂದಾಗ ಇನ್ನೊಂದು ಬದಿಯಲ್ಲಿ ಬರುವ ವಾಹನಕ್ಕೂ ಬಹಳ ತೊಂದರೆಯಾಗುತ್ತಿದ್ದು,ಆದಷ್ಟು ಬೇಗ ರಸ್ತೆ ಕಾಮಗಾರಿ ಮಾಡಬೇಕು ಎಂದು ಮಲ್ಲಾಪುರ ಗ್ರಾಮಸ್ಥರ ಒತ್ತಾಯವಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರಯ್ಯ
ಕೋವೀಡ್ ಪ್ರಮಾಣ ಕಡಿಮೆಯಾದಂತೆ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು,ವಿಧ್ಯರ‍್ಥಿಗಳು ಈ ಕಿರಿದಾದ ರಸ್ತೆ ಯಲ್ಲಿ ತಿರುಗಾಡಲು ಕಷ್ಟವಾಗಿದೆ.ನಕಾಶೆಯಲ್ಲಿ ರಸ್ತೆ ಅಗಲ ಇದ್ದು ತಹಶೀಲ್ದಾರ್ ನೇತೃತ್ವದಲ್ಲಿ ರಸ್ತೆ ಅಗಲೀಕರಣ ಮಾಡಬೇಕು.ಯಾವ ಅಧಿಕಾರಿಗಳಾಗಲಿ ,ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸಿಲ್ಲ.ಇನ್ನಾದರೂ ಈ ರಸ್ತೆಗೆ ಕಾಯಕಲ್ಪ ಕೊಟ್ಟು ಆದಷ್ಟು ಬೇಗ ಡಾಂಬರೀಕರಣ ಮಾಡಿ ರ‍್ಕಾರಿ ಐಟಿಐ ಕಾಲೇಜಿಗೆ ಉಪಯೋಗವಾಗಲಿ ಎಂಬುವುದೇ ನಮ್ಮ ಗ್ರಾಮಸ್ಥರ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಈ ಸಂರ‍್ಭದಲ್ಲಿ ಗ್ರಾಮಸ್ಥರಾದ ಕೇಶವಯ್ಯ,ರಾಮಯ್ಯ,ರಾಜು,ಪರಮೇಶ್, ತಿಮ್ಮಯ್ಯ ,ಇತರರು ಹಾಜರಿದ್ದರು.