ಇಂಧನ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ.


ಪ್ರವೀಣ್ ಶೆಟ್ಟಿ ಬಣದ ತಾಲೂಕು ಕರವೇ ವತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ, ಇಂಧನ ದರ ಹಾಗೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಿದರು.


ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ‌ಎಸ್ ಭೋಜೇಗೌಡ ನೇತೃತ್ವದಲ್ಲಿ ಬೆಲೆ ಏರಿಕೆ ,ಡೀಸೇಲ್ ,ಪೆಟ್ರೋಲ್ ಏರಿಕೆ ವಿರೋಧಿಸಿ ಕೇಂದ್ರ ಹಾಗೂ ರಾಜ್ಯ ರ‍್ಕಾರದ ವಿರುದ್ಧ ಪ್ರತಿಭಟಿಸಲಾಯಿತು.

ಈ ಸಂರ‍್ಭದಲ್ಲಿ  ಕರವೇ ತಾಲೂಕು ಅಧ್ಯಕ್ಷ ವಿ ಎಸ್ ಭೋಜೇಗೌಡ ಮಾತನಾಡಿ

  ಶ್ರೀಮಂತರು ಬಂಡವಾಳ ಶಾಹಿಗಳಿಗಳಿಗೆ ಮಣೆ ಹಾಕಿರುವ ಬಿಜೆಪಿ ರ‍್ಕಾರ ಬಡವರ ಜೀವನದ ಜೊತೆ ಚಲ್ಲಾಟವಾಡುತ್ತಿದೆ.ಕೊವೀಡ್ ಸಮಯದಲ್ಲಿ ಬೆಲೆ ಏರಿಕೆಯನ್ನು ಗಗನಕ್ಕೆ ಮುಟ್ಟಿಸುತ್ತಿರುವ ಇವರಿಗೆ ಸರಿಯಾದ ಆಡಳಿತ ನಡೆಸಲು ಬರುತ್ತಿಲ್ಲ.ಬಡವರು ದೀನದಲಿತರ ಪರವಾಗಿ ಎಂದಿಗೂ ಜೊತೆ ಇರುತ್ತೇನೆ ಎಂದು ಸುಳ್ಳು ಹೇಳಿ ಅವರನ್ನು ದಿಕ್ಕು ತಪ್ಪಿಸುವಂತಹ ಕೆಲಸ  ರ‍್ಕಾರ ಮಾಡುತ್ತಿದೆ

.ರ‍್ಕಾರದ ಮಂತ್ರಿಗಳಂತೂ ಬ್ರಷ್ಟಾಚಾರದಲ್ಲಿ ತೊಡಗಿದ್ದಾರೆ.ಇನ್ನು ಹಸಿರು ಶಾಲು ಹೊದ್ದು ರೈತರ ಪರವಾಗಿ ಎಂದಿಗೂ ಇರುತ್ತೇವೆ ಎಂದು ಪ್ರಮಾಣ ಮಾಡಿ ಆಳ್ವಿಕೆ‌ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನವರ ಭರವಸೆ ಕೇವಲ ಆಣೆಯಲ್ಲಿ ಇದ್ದುದ್ದೇ ಹೊರತು ಆಡಳಿತದಲ್ಲಿ ಇಲ್ಲ.ದಿನ ಬಳಕೆ ಅಗತ್ಯವಸ್ತುಗಳ ಬೆಲೆ ದಿನದಿಂದ ದಿನಕ್ಕೆ  ಹೆಚ್ಚುತ್ತಿದ್ದು,ಜನಸಾಮಾನ್ಯರ ಆದಾಯ ಕೋವೀಡ್ ಸಮಯದಲ್ಲಿ ಕಡಿಮೆಯಾದ ಸಮಯದಲ್ಲಿ ಬೇಕಾಬಿಟ್ಟಿ ಹೆಚ್ಚಿನ ಬೆಲೆಗೆ ಏರಿಸುತ್ತಿರುವುದು ಸರಿಯಲ್ಲ.ರೈತರು ಬೆಳೆದ ಬೆಳೆಗಳು ಕಡಿಮೆ ಬೆಲೆಗೆ  ಮಾರಾಟವಾದರೆ ಇನ್ನೊಂದು ಕಡೆ ರಸಗೊಬ್ಬರಗಳ ಬೆಲೆ ಏರಿಕೆ ಮಾಡುತ್ತಿದ್ದು ಅವರ ಜೀವನಕ್ಕೂ ಕೊಡಲಿ ಪೆಟ್ಟು ಕೊಡುತ್ತಿದ್ದು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತ್ರ ಆಡಳಿತ ಚುಕ್ಕಾಣಿ ಹಿಡಿದಿದ್ದು ಇಂತಹ ಬಿಜೆಪಿ ರ‍್ಕಾರಕ್ಕೆ ನಾಚಿಕೆಯಾಗಬೇಕು. ಇನ್ನು ದಿನಸಿ ಅಂಗಡಿಗಳಲ್ಲಿ  ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ನಮ್ಮ ಆಗಮನಕ್ಕೆ ಬಂದಿದ್ದು ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡಿ ಅಂಗಡಿಗಳನ್ನು ಸಂಪರ‍್ಣ ಮುಚ್ಚಿಸಬೇಕು ಅಲ್ಲದೆ

ನಮ್ಮ ಹೋರಾಟ ಏನಿದ್ದರೂ ರ‍್ಕಾರದ ಕಣ್ಣುತೆರೆಸಲು ಹೊರತು ಸುಮ್ಮನೆ ಹೋರಾಟ ಮಾಡಿ ಹೋಗುವುದಲ್ಲ.ಇನ್ನು ಮುಂದಾದರೂ ರ‍್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದರೆ ಉಘ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ನಂತರ ತಾಲೂಕು ಯುವಘಟಕದ ಅಧ್ಯಕ್ಷ ಅರುಣ್ ಸಿಂಗ್ ಮಾತನಾಡಿ ದಿನದಿಂದ ದಿನಕ್ಕೆ ಜೀವನ ಸಾಗಿಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ,ಸಮಾನ್ಯರ ಜೀವನ ಕಷ್ಟಕರವಾಗಿದೆ.ಅಧಿಕಾರಕ್ಕೆ ಬಂದರೆ ಯುವ ಜನರಿಗೆ  ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಆದರೆ ಇಂದು ಬಡವರ ಸ್ಥಿತಿ ಶೋಚನೀಯವಾಗಿದೆ.  ರೈಲ್ವೆ, ವಿಮಾನ ನಿಲ್ದಾಣ ಖಾಸಗೀಕರಣ ಮಾಡಲಾಗುತ್ತಿದೆ. ಕೇಂದ್ರ ರ‍್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ,ಬಿಜೆಪಿ ರ‍್ಕಾರದ ಜನವಿರೋಧಿ ನೀತಿಗಳಿಂದ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಅಡುಗೆ ಎಣ್ಣೆ ಹಾಗೂ ಇತರೆ ದಿನಸಿ ಪದರ‍್ಥಗಳ ಬೆಲೆ ಏರಿಕೆಯಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.

ಈ ಸಂರ‍್ಭದಲ್ಲಿ ಕರ‍್ಯರ‍್ಶಿ ಜಯಪ್ರಕಾಶ್, ಪಧಾಧಿಕಾರಿಗಳಾದ ಶರತ್,ವಿಶ್ವನಾಥ್,ಸಾಗರ್,ಕೃಷ್ಣಮರ‍್ತಿ, ಚಂದನ್ ,ಗವೀಶ್,ರಂಜೀತ್ ಇತರರು ಹಾಜರಿದ್ದರು.


Post a Comment

Previous Post Next Post