ಅನ್‌ಲಾಕ್ ಹೊಸ್ತಿಲಲ್ಲಿ ಬ್ಯಾರಿಕೇಡ್

ಹಾಸನ: ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಅಬ್ಬರ ಕೊಂಚ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮವೂ ಪ್ರಮುಖ ಕಾರಣ. ಆದರೆ ಎರಡನೇ ಅಲೆ ಆರಂಭದಿAದಲೂ ಲಾಕ್‌ಡೌನ್ ಜಾರಿ ಮಾಡಿದ ನಂತರ ಜನ ಮತ್ತು ವಾಹನ ಸಂಚಾರಕ್ಕೆ ಪರಿಣಾಮಕಾರಿಯಾಗಿ ತಡೆ ಒಡ್ಡಿರಲಿಲ್ಲ. ಕೆಲವು ಕಡೆಗಳಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವುದು ಬಿಟ್ಟರೆ ಜನ ಮತ್ತು ವಾಹನ ಸಂಚಾರ ರಾಜಾರೋಷವಾಗಿತ್ತು. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದಡಿ ಅನಗತ್ಯ ಓಡಾಡುವವರಿಗೆ ದಂಡ ವಿಧಿಸಲಾಯಿತು. ನೂರಾರು ವಾಹನಗಳನ್ನೂ ವಶಕ್ಕೆ ಪಡೆಯಲಾಯಿತು. ಇಷ್ಟು ಬಿಟ್ಟರೆ ಬೇರೇನೂ ಆಗಿರಲಿಲ್ಲ.


ದಿಢೀರ್ ಬ್ಯಾರಿಕೇಡ್ ನಿರ್ಮಾಣ:

ಆದರೆ ಮರ‍್ನಾಲ್ಕು ದಿನಗಳಿಂದ ಈಚೆಗೆ ನಗರದ ಹಲವು ಕಡೆಗಳಲ್ಲಿ ದಿಢೀರ್ ಎಂದು ಮರದ 

ಕಂಬಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಕೆಲವೆಡೆ ರಾತ್ರೋರಾತ್ರಿ ತಡೆಗೋಡೆ ತಲೆ ಎತ್ತಿರುವುದು ಅಚ್ಚರಿ ತರಿಸಿದೆ. ಆರ್.ಸಿ.ರಸ್ತೆ, ಎಂಜಿ ರಸ್ತೆ, ವಿದ್ಯಾನಗರ ರಸ್ತೆ, ನಾಗರಕಟ್ಟೆಬಾವಿ ರೋಡ್, ಕುವೆಂಪುನಗರ ಗಣಪತಿ ದೇವಾಲಯ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿದೆ. ಜನರ ಸ್ವೇಚ್ಛಾಚಾರದ ಓಡಾಟ ತಡೆಗೆ ಇದು ಅನಿವಾರ್ಯ ಮತ್ತು ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆರಂಭದಿAದಲೂ ಈ ಕ್ರಮ ಏಕೆ ಜಾರಿಯಾಗಲಿಲ್ಲ ಎಂಬುದು ಅನೇಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಅರ್ಥವಾಗದ ಮರ್ಮ:

ಜೂನ್ 14ಕ್ಕೆ ಸರ್ಕಾರ ಹೇರಿರುವ ಲಾಕ್‌ಡೌನ್ ಅಂತ್ಯವಾಗಲಿದೆ. ಮತ್ತೆ ಮುಂದುವರಿಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಸರ್ಕಾರಕ್ಕೂ ಲಾಕ್‌ಡೌನ್ ಮುಂದುವರಿಸುವುದು ಇಷ್ಟವಿಲ್ಲ. ಹೀಗಾಗಿ ಹಂತ ಹಂತವಾಗಿ ಲಾಕ್‌ಡೌನ್ ಸಡಿಲವಾಗಲಿದೆ ಎಂದು ಸರ್ಕಾರವೇ ಹೇಳಿದೆ.

ಹಾಸನ ಜಿಲ್ಲೆಯ ವಿಚಾರದಲ್ಲಿ ಯಾವ ನಿರ್ಧಾರ ಹೊರಬೀಳಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಗೊಂದಲ ನಡುವೆ ಕಡೆ ಘಳಿಗೆಯಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೂ.14 ರ ನಂತರವೂ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರಿಸಿದರೆ ಇದು ಉಪಯೋಗಕ್ಕೆ ಬರುವುದರಲಿಲ್ಲ ಯಾವುದೇ ಅನುಮಾನವಿಲ್ಲ. ಆದರೆ ಅನ್‌ಲಾಕ್ ಅನಿಶ್ಚಿತತೆ ನಡುವೆ ದಿಢೀರ್ ಬ್ಯಾರಿಕೇಡ್ ಅಳವಡಿಸಿದ್ದೇಕೆ ಎಂಬುದು ಅಕ್ಷರಶಃ ಗೊಂದಲಾಪುರವಾಗಿದೆ. ಇದೆಲ್ಲದರ ನಡುವೆ ಈ ನಡೆ, ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರಿಯುವ ಮುನ್ಸೂಚನೆಯೇ ಎಂಬ ಶಂಕೆ ಮೂಡಿಸಿದೆ.

ವಿರ‍್ಯಾಸ ಎಂದರೆ ಪ್ರಮುಖ ರಸ್ತೆಗಳ ಸಂಚಾರ ಬಂದ್ ಮಾಡಿದ್ದರೂ, ನಮ್ಮ ಜನರು ಬುದ್ಧಿ ಕಲಿತಿಲ್ಲ. ಬದಲಾಗಿ ಅಡ್ಡ ಹಾಗೂ ಕಿರುರಸ್ತೆಗಳನ್ನೇ ನುಸುಳಿ ಹೋಗಬೇಕಿದ್ದ ಕಡೆಗೆ ಹೋಗುತ್ತಲೇ ಇದ್ದಾರೆ. ಇದರಿಂದ ಟ್ರಾಫಿಕ್ ಜಾಂ ಕಿರಿಕಿರಿಯೂ ಶುರುವಾಗಿದೆ.

ಸಂಚಾರ ತಡೆಗೆ ಈ ಕ್ರಮ:

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಆರ್.ಗಿರೀಶ್, ವಾರದಲ್ಲಿ 3 ದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಹೆಚ್ಚು ಜನ ಹಾಗೂ ವಾಹನ ಓಡಾಡುವುದನ್ನು ಕಡಿಮೆ ಮಾಡಲು ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಯಾಗುವವರೆಗೂ ಕಠಿಣ ಕ್ರಮಗಳನ್ನು ಮುಂದುವರಿಸಲಾಗುವುದು. ಜೂನ್ 14 ರ ನಂತರ ಲಾಕ್‌ಡೌನ್ ಸಡಿಲಿಕೆಯನ್ನು ರಾಜ್ಯ ಸರ್ಕಾರದ ನಿರ್ದೇಶನದಂತೆ ಮಾಡಲಾಗುವುದು ಎಂದು ತಿಳಿಸಿದರು. 


 ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆ ಆಗಿಲ್ಲ.ಆಲೂರು 

ತಾಲೂಕಿನಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದ್ದು, ಉಳಿದೆಡೆ ನಿಯಂತ್ರಣಕ್ಕೆ ಬಂದಿಲ್ಲ.

ರಾಜ್ಯ ಸರ್ಕಾರ ಕಳೆದ ಜೂ.5 ರಂದು ಬಿಡುಗಡೆ ಮಾಡಿರುವ ತಾಲೂಕುವಾರು ಪಾಸಿಟಿವಿಟಿ ದರ ಇಂತಿದೆ.


ತಾಲೂಕು ಪಾಸಿಟಿವಿಟಿ ದರ


ಆಲೂರು ಶೇ.5 ಕ್ಕಿಂತ ಕಡಿಮೆ

ಸಕಲೇಶಪುರ ಶೇ.5 ರಿಂದ 10

ಬೇಲೂರು, ಶೇ.5 ರಿಂದ 10

ಚನ್ನರಾಯಪಟ್ಟಣ ಶೇ.5 ರಿಂದ 10

ಹಾಸನ ಶೇ.10 ರಿಂದ 15

ಅರಸೀಕೆರೆ, ಶೇ.10 ರಿಂದ 15

ಹೊಳೆನರಸೀಪುರ ಶೇ.15 ರಿಂದ 20

ಅರಕಲಗೂಡು, ಶೇ.20 ರಿಂದ 25

1 Comments

  1. When enjoying in} at a Live Casino, you’ll discover that roulette out there in} many variants with distinctive options and, often, totally different betting rules. One of the distinguishing options of enjoying in} roulette on-line is the flexibleness. Players 먹튀검증 abc-1111 can take the gameplay at their very own tempo and consult of} the principles at any time.

    ReplyDelete
Previous Post Next Post